Ad

ಪೆಟ್ರೋಲ್, ಡೀಸೆಲ್ ದರ ಹೆಚ್ಚಳ : ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕಿಡಿ

ಚುನಾವಣೆ ಮುಗಿದ ಬೆನ್ನಲೆ ಸಿದ್ದರಾಮಯ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿದೆ ಇದರಿಂದ ಬಿಜೆಪಿ ನಾಯಕರು ತಮ್ಮ ವಿರೋಧವನ್ನು ವ್ಯಕ್ತಪಡಿಸಿವೆ.

ಮಂಡ್ಯ : ಚುನಾವಣೆ ಮುಗಿದ ಬೆನ್ನಲೆ ಸಿದ್ದರಾಮಯ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿದೆ ಇದರಿಂದ ಬಿಜೆಪಿ ನಾಯಕರು ತಮ್ಮ ವಿರೋಧವನ್ನು ವ್ಯಕ್ತಪಡಿಸಿವೆ. ಮದ್ಯ ಮಾರಾಟದಲ್ಲಿ ಬೆಲೆ ಏರಿಕೆ ಮಾಡಿದ್ದಾಯ್ತು. ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿದ್ದಾಯ್ತು ಇದೀಗ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Ad
300x250 2

ಇಂದು ಮಂಡ್ಯದ ಡಿಸಿ ಕಚೇರಿ ಸಂಕೀರ್ಣದಲ್ಲಿರುವ ನೂತನ ಸಂಸದ ಕಚೇರಿ ಉದ್ಘಾಟಿಸಿದ ಬಳಿಕ ಮಾತನಾಡಿದ ಸಚಿವರು, ಲೋಕಸಭಾ ಚುನಾವಣೆ ಮುಗಿಯುವವರಿಗೆ ಕಾದು ಇದೀಗ ಐದು ಗ್ಯಾರಂಟಿಗಾಗಿ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ. ಇದು ಜನ ಸಾಮಾನ್ಯರ ವಿರೋಧಿ ಸರ್ಕಾರವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಟ್ರಾನ್ಸ್‌ಪೋರ್ಟ್ ಮೇಲೆ ಒಡೆತ ಬೀಳುತ್ತೆ. ಇದರಿಂದ ರೈತರಿಗೆ ತೊಂದರೆಯಾಗುತ್ತೆ. ಈ ಸರ್ಕಾರ ನೇರವಾಗಿ ಬಡವರು, ರೈತರಿಗೆ ಕಿಸೆಗೆ ಕೈಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Ad
Ad
Nk Channel Final 21 09 2023
Ad