ಲಂಡನ್: ಪಾಕಿಸ್ತಾನ ಕ್ರಿಕೆಟ್ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಶಾಹೀನ್ ಅಫ್ರಿದಿ T20 ಬ್ಲಾಸ್ಟ್ ಟೂರ್ನಿಯಲ್ಲಿ ಒಂದೇ ಓವರ್ನಲ್ಲಿ ನಾಲ್ಕು ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ. ದುರದೃಷ್ಟವಶಾತ್ ಅಫ್ರಿದಿ ಯಾರ್ಕರ್ ದಾಳಿಯ ಹೊರತಾಗಿಯೂ ಪಾಕ್ ತಂಡ 2 ವಿಕೆಟ್ಗಳ ಅಂತರದಿಂದ ಸೋಲು ಕಂಡಿದೆ.
20 ಬ್ಲಾಸ್ಟ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ನಾಟಿಂಗ್ಹ್ಯಾಮ್ ಶೈರ್ ಪರ ಪ್ರತಿನಿಧಿಸಿದ್ದ ಎಡಗೈ ಅಫ್ರಿದಿ, ಮೊದಲ ಓವರ್ನಲ್ಲೇ ಅಲೆಕ್ಸ್ ಡೇವಿಡ್ಸ್(0), ಕ್ರಿಸ್ ಬೆನ್ಜಮಿನ್(0), ಡ್ಯಾನ್ ಮೌಸ್ಲಿ(1) ಹಾಗೂ ಎಡ್ ಬೆರ್ನಾರ್ಡ್(0) ಅವರ ವಿಕೆಟ್ಗಳನ್ನು ಪಡೆಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಧೂಳೆಬ್ಬಿಸಿದ್ದಾರೆ.
ಇದರೊಂದಿಗೆ ಒಂದೇ ಓವರ್ನಲ್ಲಿ 4 ವಿಕೆಟ್ ಕಿತ್ತ ಮೊದಲ ವೇಗಿ ಎಂಬ ವಿಶ್ವದಾಖಲೆಯನ್ನೂ ಬರೆದಿದ್ದಾರೆ. ಶಾಹೀನ್ ವಿಕೆಟ್ ಪಡೆದ ವೀಡಿಯೋ ತುಣುಕು ಇದೀಗ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಶಾಹೀನ್ ಅಫ್ರಿದಿ ಬೌಲರ್ ಕಂಡ ಕೆಲವರು ಏಕದಿನ ವಿಶ್ವಕಪ್ನಲ್ಲಿ ಇದು ಎಚ್ಚರಿಕೆ ಗಂಟೆಯಾಗಿದೆ ಎಂದು ಬಣ್ಣಿಸಿದ್ದಾರೆ.