News Karnataka Kannada
Tuesday, April 23 2024
Cricket
ಸಾಂಡಲ್ ವುಡ್

ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ ವಿಧಿವಶ

producer kcn mohan
Photo Credit : News Kannada

ಸ್ಯಾಂಡಲ್‌ವುಡ್ ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್(62) ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮೋಹನ್ ಅವರು ಚಿಕಿತ್ಸೆ ಫಲಿಸದೇ ಭಾನುವಾರ (ಜುಲೈ 2)ರಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.

ಮೋಹನ್ ಒಡೆತನದಲ್ಲಿ ಜಯಸಿಂಹ, ಭಲೇ ಚತುರ, ಜೂಲಿ, ಹೂಮಳೆ, ಅಳಿಮಯ್ಯ, ಆಚಾರ್ಯ, ಪೊಲೀಸ್ ಪವರ್, ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ಮಾಣ ಮಾಡಿದ್ದ ಕೆಸಿಎನ್ ಮೋಹನ್ ಅವರು ತಮ್ಮ ತಂದೆ ನಿರ್ಮಾಪಕ ಕೆಸಿಎನ್ ಗೌಡ್ರು ಅವರ ನಿಧನ ಬಳಿಕ ಅನುಪಮ್ ಮೂವೀಸ್ ಜವಾಬ್ದಾರಿಯನ್ನ ಹೊತ್ತಿದ್ದರು. ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ಕೆಸಿಎನ್ ಮೋಹನ್ ಸಾಥ್ ನೀಡಿದ್ರು. ನಿರ್ಮಾಪಕ ಮೋಹನ್, ಬೆಂಗಳೂರಿನ ನವರಂಗ್ ಚಿತ್ರಮಂದಿರದ ಮಾಲಿಕರಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ಮೋಹನ್ ಅವರ ಪತ್ನಿ ನಿಧನರಾಗಿದ್ದರು. ಸಹೋದರ ಚಂದ್ರಶೇಖರ್ ಕೂಡ ನಿಧನರಾಗಿದ್ದಾರೆ. ಇದೀಗ ಇಬ್ಬರೂ ಹೆಣ್ಣು ಮಕ್ಕಳನ್ನು ಬಿಟ್ಟು ಮೋಹನ್ ಅಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು