News Karnataka Kannada
Tuesday, May 07 2024
ಕ್ರೀಡೆ

ಸಿಸ್ಟೋಬಾಲ್ ವಿಶ್ವಕಪ್‍ನಲ್ಲಿ ವಿಜಯಪುರದ ವಿದ್ಯಾರ್ಥಿನಿಯ ಸಾಧನೆ

Shruthi T, a research scholar. S.
Photo Credit : News Kannada

ವಿಜಯಪುರ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮೊದಲ ಮಹಿಳಾ ಸಿಸ್ಟೋಬಾಲ್ ವಿಶ್ವಕಪ್‍ನಲ್ಲಿ ಭಾರತೀಯ ವನಿತೆಯರ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ಈ ತಂಡದಲ್ಲಿದ್ದ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಂಶೋಧನೆ ವಿದ್ಯಾರ್ಥಿನಿ ಶೃತಿ ಟಿ. ಎಸ್. ಅತ್ಯುತ್ತಮ ಪ್ರದರ್ಶನ ತೋರಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮೇ ತಿಂಗಳ ಕೊನೆಯ ವಾರದಲ್ಲಿ ನಡೆದ ಸಿಸ್ಟೋಬಾರ್ ವಿಶ್ವಕಪ್‍ನಲ್ಲಿ ಭಾರತ, ಶ್ರೀಲಂಕಾ ಅರ್ಜೆಂಟೀನಾ, ಬಾಂಗ್ಲಾ, ಭೂತಾನ ಮತ್ತು ಪ್ರಾನ್ಸ್ ದೇಶಗಳು ಭಾಗವಹಿಸಿದ್ದವು. ಈ ಸ್ಪರ್ಧೆಯಲ್ಲಿ ಅಂತಿಮವಾಗಿ ಅರ್ಜೆಂಟೀನಾ ಮಹಿಳೆಯರು ಭಾರತೀಯ ವನಿತೆಯರನ್ನು ಸೋಲಿಸಿ ಮೊದಲ ವಿಶ್ವಕಪ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ರನ್ನರ್ ಅಪ್ ಭಾರತ ತಂಡದಲ್ಲಿ ವಿಜಯಪುರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಂಶೋಧನೆ ವಿದ್ಯಾರ್ಥಿನಿ ಶೃತಿ ಟಿ. ಎಸ್. ಅತ್ಯುತ್ತಮ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ, ಕುಲಸಚಿವ ಪ್ರೊ. ಬಿ. ಎಸ್. ನಾವಿ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಸಕ್ಪಾಲ್ ಹೂವಣ್ಣ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು