ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗಿದೆ. ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ನವೆಂಬರ್ 19 ರಂದು ನಡೆಯಲಿದೆ.ಈ ವರ್ಷದ ಏಕದಿನ ವಿಶ್ವಕಪ್ ಅಕ್ಟೋಬರ್ 5ರಂದು ಆರಂಭವಾಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ತನ್ನ ಅಭಿಯಾನ ಆರಂಭಿಸಲಿದೆ. ಅದರಂತೆ ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ… ಅಕ್ಟೋಬರ್ 8 ಭಾರತ vs ಆಸ್ಟ್ರೇಲಿಯಾ (ಚೆನ್ನೈ), ಅಕ್ಟೋಬರ್ 11 ಭಾರತ vs ಅಫ್ಘಾನಿಸ್ತಾನ (ದೆಹಲಿ), ಅಕ್ಟೋಬರ್ 15 ಭಾರತ vs ಪಾಕಿಸ್ತಾನ(ಅಹಮದಾಬಾದ್), ಅಕ್ಟೋಬರ್ 19 ಭಾರತ vs ಬಾಂಗ್ಲಾದೇಶ (ಪುಣೆ), ಅಕ್ಟೋಬರ್ 22 ಭಾರತ vs ನ್ಯೂಜಿಲ್ಯಾಂಡ್ (ಧರ್ಮಶಾಲಾ), ಅಕ್ಟೋಬರ್ 29 ಭಾರತ vs ಇಂಗ್ಲೆಂಡ್ (ಲಖನೌ),
ನವೆಂಬರ್ 2 ಭಾರತ vs ಕ್ವಾಲಿಪೈಯರ್ 2 (ಮುಂಬೈ), ನವೆಂಬರ್ 5 ಭಾರತ vs ದಕ್ಷಿಣ ಆಫ್ರಿಕಾ (ಕೋಲ್ಕತ್ತಾ), ನವೆಂಬರ್ 11 ಭಾರತ vs ಕ್ವಾಲಿಫೈಯರ್ 1 (ಬೆಂಗಳೂರು).
ಮೊದಲ ಸೆಮಿಫೈನಲ್ ಪಂದ್ಯವು ನ.15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದರೆ, 2ನೇ ಸೆಮಿಫೈನಲ್ ಪಂದ್ಯವು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನ. 16 ರಂದು ನಡೆಯಲಿದೆ. ನ.19 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ.