News Karnataka Kannada
Tuesday, May 07 2024
ಕ್ರೀಡೆ

ಗೆಲುವಿನ ಸನಿಹದಲ್ಲಿ ಭಾರತ : ನ್ಯೂಜಿಲ್ಯಾಂಡ್​

India Win Cricket 17082021
Photo Credit :

ನ್ಯೂಜಿಲ್ಯಾಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಭಾರತವು ಗೆಲುವಿನ ಸನಿಹ ತಲುಪಿದೆ. 3ನೇ ದಿನದಂತ್ಯಕ್ಕೆ ಕೊಹ್ಲಿ ಪಡೆದ ನೀಡಿದ 540 ರನ್​ಗಳನ್ನು ಬೆನ್ನಟ್ಟಿರುವ ನ್ಯೂಜಿಲ್ಯಾಂಡ್​ ತಂಡ 5 ವಿಕೆಟ್​ ಕಳೆದುಕೊಂಡು 140 ರನ್​ಗಳಿಸಿದೆ. ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲು 5 ವಿಕೆಟ್​ ಅಗತ್ಯವಿದ್ದರೆ, ಕಿವೀಸ್​ ಗೆಲ್ಲಲು 400 ರನ್​ಗಳ ಅವಶ್ಯಕತೆಯಿದೆ.

ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 325 ರನ್​ಗಳಿಗೆ ಆಲೌಟ್ ಆದರೆ, ಕಿವೀಸ್​ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 62 ರನ್​ಗಳಿಗೆ ಸರ್ವಪತನ ಕಂಡಿತ್ತು. ಮೊದಲ ಇನ್ನಿಂಗ್ಸ್​ನ ಸಿಕ್ಕ 263 ರನ್​ಗಳ ಬೃಹತ್​ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ್ದ ಭಾರತ 7 ವಿಕೆಟ್​ ಕಳೆದುಕೊಂಡು 276 ರನ್​ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡು ಪ್ರವಾಸಿ ತಂಡಕ್ಕೆ 540 ರನ್​ಗಳ ಬೃಹತ್ ಗುರಿ ನೀಡಿತು.

ಮಯಾಂಕ್​ ಅಗರ್ವಾಲ್ 62, ಪೂಜಾರ 47, ಶುಬ್ಮನ್​ ಗಿಲ್​ 47, ಕೊಹ್ಲಿ 36 ಮತ್ತು ಅಕ್ಷರ್ ಪಟೇಲ್ 41 ರನ್​ಗಳಿಸಿದ್ದರು. ಕಿವೀಸ್​ ಪರ ಮೊದಲ ಇನ್ನಿಂಗ್ಸ್​ನಲ್ಲಿ ಎಲ್ಲಾ 10 ವಿಕೆಟ್ ಪಡೆದಿದ್ದ ಅಜಾಜ್​ ಮತ್ತೆ 4 ವಿಕೆಟ್ ಪಡೆದರೆ, ರಚಿನ್ ರವೀಂದ್ರ 3 ವಿಕೆಟ್ ಪಡೆದರು.

540 ರನ್​ಗಳ ಗುರಿ ಬೆನ್ನಟ್ಟಿದ ಕಿವೀಸ್​ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ದಾಳಿಗೆ ಸಿಲುಕಿ 55 ರನ್​ಗಳಾಗುಷ್ಟರಲ್ಲಿ 3 ವಿಕೆಟ್​ ಕಳೆದುಕೊಂಡಿತು. ನಾಯಕ ಟಾಮ್ ಲೇಥಮ್​(6), ವಿಲ್​ ಯಂಗ್(20) ಮತ್ತು ರಾಸ್​ ಟೇಲರ್​(6) ಅಶ್ವಿನ್ ಸ್ಪಿನ್ ಮೋಡಿಗೆ ಬಲಿಯಾದರು.

ಆದರೆ 4ನೇ ವಿಕೆಟ್​ಗೆ ಒಂದಾದ ಡೇರಿಲ್ ಮಿಚೆಲ್ ಮತ್ತು ಹೆನ್ರಿ ನಿಕೋಲ್ಸ್​ 73 ರನ್​ ಸೇರಿಸಿ ಭಾರತೀಯ ಬೌಲರ್​ಗಳನ್ನು ಸ್ವಲ್ಪ ಸಮಯ ಕಾಡಿದರು. ಆದರೆ 2ನೇ ಸ್ಪೆಲ್​ನಲ್ಲಿ ದಾಳಿಗಿಳಿದ ಅಕ್ಷರ್​ ಪಟೇಲ್​ 92 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 60 ರನ್​ಗಳಿಸಿದ್ದ ಮಿಚೆಲ್ ವಿಕೆಟ್​ ಪಡೆದು ಬ್ರೇಕ್ ನೀಡಿದರು. ಇವರ ಬೆನ್ನಲ್ಲೇ ಬಂದ ವಿಕೆಟ್ ಕೀಪರ್ ಟಾಮ್ ಬ್ಲಂಡೆಲ್ ಖಾತೆ ತೆರೆಯುವ ಮುನ್ನವೇ ರನ್​ಔಟ್ ಆಗಿ ವಾಪಸ್ ಆದರು.

ಸಧ್ಯ ಹೆನ್ರಿ ನಿಕೋಲ್ಸ್​ ಅಜೇಯ 36 ಮ್ತು ರಚಿನ್ ರವೀಂದ್ರ 2 ರನ್​ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಭಾರತದ ಪರ ಆರ್ ಅಶ್ವಿನ್ 27ಕ್ಕೆ 3, ಅಕ್ಷರ್ ಪಟೇಲ್ 42ಕ್ಕೆ 1 ವಿಕೆಟ್ ಪಡೆದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು