ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿರುವ ಭಾರತ ಈಗ ಶತಕದ ಗುರಿ ದಾಟಿದೆ.
ಭಾರತ 39 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡಿದ್ದು, 109 ರನ್ ಗಳಿಸಿದೆ. ಆರಂಭದಲ್ಲಿ ಆಡಿದ ಮಾಯಂಕ್ ಅಗರ್ವಾಲ್ 28 ಎಸೆತಗಳಲ್ಲಿ ಕೇವಲ 13 ರನ್ ಗಳಿಸಿದ್ದು, ಶುಭಮಾನ್ ಗಿಲ್ 93 ಎಸೆತಗಳಲ್ಲಿ 52 ರಸ್ ಗಳಿಸಿಕೊಟ್ಟಿದ್ದಾರೆ.
ಚೇತೇಶ್ವರ್ ಪೂಜಾರ 88 ಬಾಲ್ ಗಳಲ್ಲಿ 24 ಗಳಿಸಿ ಪಂದ್ಯದಿಂದ ಹೊರನಡೆದರು. ಇದೀಗ ಕ್ಯಾಪ್ಟನ್ ಅಜಿಂಕ್ಯಾ ರಹಾನೆ 24 ಎಸೆತಗಳಲ್ಲಿ 13 ರನ್ ಕಲೆಹಾಕಿದ್ದು, ಜತೆಯಾಟಕ್ಕೆ ಶ್ರೇಯಸ್ ಅಯ್ಯರ್ ಅಂಗಳಕ್ಕಿಳಿದಿದ್ದಾರೆ.
ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಹಾಗೈ ನ್ಯೂಜಿಲೆಂಡ್ ನ ರಚಿನ್ ರವೀಂದ್ರ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ.