ಕೋಲ್ಕತ್ತಾ ಬೌಲಿಂಗ್ ದಾಳಿಗೆ ತತ್ತರಿಸಿದ ಬೆಂಗಳೂರು ತಂಡ ಕೇವಲ 92 ರನ್ಗಳಿಗೆ ಆಲೌಟ್ ಆಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ 5ರನ್ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದು ನಿರಾಶೆಯನುಭವಿಸದಿದರು.
ನಂತರ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದ ಯುವ ಆಟಗಾರರಾದ ದೇವದತ್ ಪಡಿಕ್ಕಲ್(22) ಮತ್ತು ಶ್ರೀಕಾರ್ ಭರತ್(16) 2ನೇ ವಿಕೆಟ್ಗೆ 31 ರನ್ ಸೇರಿಸಿದರು. ಪಡಿಕ್ಕಲ್(22) ಲಾಕಿ ಫರ್ಗ್ಯುಸನ್ ಬೌಲಿಂಗ್ನಲ್ಲಿ ಕಾರ್ತಿಕ್ಗೆ ಕ್ಯಾಚ್ ನೀಡಿ ನಿರ್ಗಮಿಸುತ್ತಿದ್ದಂತೆ ಆರ್ಸಿಬಿ ವಿಕೆಟ್ ಬೀಳಲು ಶುರುವಾಯಿತು.
ನಂತರ 16 ರನ್ಗಳಿಸಿದ್ದ ಭರತ್ ಗಿಲ್ಗೆ ಕ್ಯಾಚ್ ನೀಡಿದರೆ, ನಂತರದ ಎಸೆತದಲ್ಲಿ ಎಬಿ ಡಿ ವಿಲಿಯರ್ಸ್ ಕ್ಲೀನ್ ಬೌಲ್ಡ್ ಆಗಿ ಗೋಲ್ಡನ್ ಡಕ್ ಆದರು. ಮ್ಯಾಕ್ಸ್ವೆಲ್ ಕೇವಲ 10 ರನ್ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಂತರ ಬಂದ ಹಸರಂಗ(0), ಸಚಿನ್ ಬೇಬಿ(7),ಕೈಲ್ ಜೆಮೀಸನ್(4) ಹರ್ಷಲ್ ಪಟೇಲ್ (12) ಮತ್ತು ಸಿರಾಜ್ (8) ರನ್ಗಳಿಸಿ ಔಟಾದರು.
ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 13ಕ್ಕೆ 3, ಆ್ಯಂಡ್ರೆ ರಸೆಲ್ 9ಕ್ಕೆ3, ಲಾಕಿ ಫರ್ಗ್ಯುಸನ್ 24ಕ್ಕೆ 2 ಮತ್ತು ಪ್ರಸಿಧ್ ಕೃಷ್ಣ 24ಕ್ಕೆ 1 ವಿಕೆಟ್ ಪಡೆದು ಆರ್ಸಿಬಿಯನ್ನು 100ರೊಳಗೆ ಕಟ್ಟಿಹಾಕಿದರು.