ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಟಿ20 ವಿಶ್ವಕಪ್ನ ಪಂದ್ಯದಲ್ಲಿ ಭಾರತ ಈವರೆಗೆ ಎಂದೂ ಕಾಣದ ಭರ್ಜರಿ ಗೆಲುವು ಸಾಧಿಸಿದೆ. ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 39 ಎಸೆತಗಳಲ್ಲಿ ಪಂದ್ಯ ಮುಗಿದೇ ಹೋಗಿದೆ.
ವಿರಾಟ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆರಂಭದಲ್ಲೇ ಮೂವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಿದ ಪ್ಲಾನ್ ವರ್ಕ್ಔಟ್ ಆಯಿತು.
ಪ್ರೆಶರ್ನಲ್ಲಿ ಬಿದ್ದ ಸ್ಕಾಟ್ಲೆಂಡ್ ತಂಡ ಒಂದಾದ ಮೇಲೊಂದರಂತೆ ವಿಕೆಟ್ ಬೀಳಿಸಿಕೊಂಡರು. ಭಾರತೀಯರ ಬೌಲಿಂಗ್ ದಾಳಿಗೆ ಸ್ಕಾಟ್ಲೆಂಡ್ ಜರ್ಜರಿತವಾಗಿದ್ದು, 17.4 ಓವರ್ಗೆ ಸ್ಕಾಟ್ಲೆಂಡ್ 85 ರನ್ ಮಾತ್ರ ಕಲೆ ಹಾಕಿತು.
86 ರನ್ಗಳ ಈಸಿ ಚೇಸ್ ಆರಂಭಿಸಿದ ಭಾರತ ಕೇವಲ 6.3 ಓವರ್ನಲ್ಲಿ 86 ರನ್ಗಳನ್ನು ಕಲೆ ಹಾಕಿತು. ಭಾರತದ ರನ್ರೇಟ್ ಉತ್ತಮಗೊಳಿಸಿಕೊಳ್ಳಲು ಈ ಪಂದ್ಯವನ್ನು 7.1 ಓವರ್ನಲ್ಲಿ ಮುಗಿಸಬೇಕಿತ್ತು. ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಜೊತೆಯಾಟದಿಂದ ಅತೀ ಸುಲಭವಾಗಿ ರನ್ಗಳನ್ನು ಕಲೆ ಹಾಕಲಾಯ್ತು.