Bengaluru 23°C
Ad

ಮನೆಯ ಮುಖ್ಯ ಬಾಗಿಲಿನ ಮೇಲೆ ದೇವರ ಚಿತ್ರ ಹಾಕಿದರೆ ಏನಾಗುತ್ತದೆ?

Door (1)

ಕೆಲವು ತಜ್ಞರು ಮನೆಯ ಬಾಗಿಲುಗಳ ಮೇಲೆ, ವಿಶೇಷವಾಗಿ ಮುಖ್ಯ ದ್ವಾರದ ಮೇಲೆ ದೇವರ ಚಿತ್ರವನ್ನು ಇಡಬಾರದು ಎಂದು ಹೇಳುತ್ತಾರೆ. ಏಕೆಂದರೆ ದೇವರು ನಿಮ್ಮ ದ್ವಾರಪಾಲಕನಲ್ಲ. ಕೆಲವು ವಿಶೇಷ ನಿಯಮಗಳನ್ನು ಅನುಸರಿಸುವ ಮೂಲಕ, ಗಣೇಶ, ಆಂಜನೇಯ ಸ್ವಾಮಿ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಬಾಗಿಲಿನ ಮೇಲೆ ಇರಿಸಬಹುದು ಎಂದು ಕೆಲವು ತಜ್ಞರು ಹೇಳುತ್ತಾರೆ. ಮನೆಯ ಮುಖ್ಯ ದ್ವಾರದ ಮೇಲಿನ ಭಾಗದಲ್ಲಿ ಗಣೇಶನ ಚಿತ್ರ ಇಡುವುದರಿಂದ ಯಾವುದೇ ಅಡೆತಡೆಗಳಿಲ್ಲದೆ ಆ ಕುಟುಬಸ್ಥರು ಸಮೃದ್ಧಿಯನ್ನು ಹೊಂದುತ್ತಾರೆ ಎನ್ನುತ್ತಾರೆ ಪಂಡಿತರು. ಇದನ್ನು ಹಾಕಿದರೆ ಮನೆಗೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ.

ಮುಖ್ಯ ಬಾಗಿಲಿನ ಮೇಲೆ ದೇವರ ಚಿತ್ರ ಹಾಕಿದರೆ ಅಲ್ಲಿ ಸದಾ ಬೆಳಕು ಇರಬೇಕು. ನೀವು ಮನೆಯಲ್ಲಿ ಇಲ್ಲದಿರುವಾಗಲೂ ಆ ಸ್ಥಳದಲ್ಲಿ ಬೆಳಕಿರಬೇಕು. ಪ್ರತಿದಿನ ಬಾಗಿಲ ಮೇಲಿರುವ ದೇವರ ಚಿತ್ರವನ್ನು ಸ್ವಚ್ಛಗೊಳಿಸಬೇಕು. ಸಾಧ್ಯವಾದರೆ, ಪ್ರತಿದಿನ ಚಿತ್ರದ ಮುಂದೆ ದೀಪವನ್ನು ಬೆಳಗಿಸಬೇಕು. ಮನೆಯ ಬಾಗಿಲಿನ ಮೇಲೆ ದೇವರ ಚಿತ್ರವಿದ್ದರೆ ಅದರ ಬಳಿ ಪಾದರಕ್ಷೆ, ಚಪ್ಪಲಿಯನ್ನು ಇಡಬೇಡಿ.

ಮನೆಯ ಮುಖ್ಯ ದ್ವಾರದ ಮೇಲೆ ನಿಯಮಗಳಿಗನುಗುಣವಾಗಿ ದೇವರ ಫೋಟೋ ಹಾಕುವುದರಿಂದ ಆ ಮನೆಯ ವಾಸ್ತು ದೋಷ ನಿವಾರಣೆಯಾಗುವುದು.ಇದು ನಿಮ್ಮ ಜೀವನದಿಂದ ನಕಾರಾತ್ಮಕತೆಯನ್ನು ಸಹ ತೆಗೆದುಹಾಕುತ್ತದೆ. ನೀವು ವೃತ್ತಿ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ನಿಮಗೆ ದೊರೆಯುತ್ತದೆ. ಮನೆಯಲ್ಲಿರುವ ಜನರ ಆರೋಗ್ಯವು ಉತ್ತಮವಾಗಿರುತ್ತದೆ. ಮಾನಸಿಕ ಶಾಂತಿ ದೊರೆಯುವುದು.

ಮನೆಯ ಮುಖ್ಯ ಬಾಗಿಲಿನ ಮೇಲೆ ದೇವರ ಫೋಟೋವನ್ನು ಹಾಕುವುದರಿಂದ ಸಾಕಷ್ಟು ಪ್ರಯೋಜನಗಳು ಇದ್ದರು ಕೂಡ ನಿಯಮಾನುಸಾರ ಅವುಗಳನ್ನು ಹಾಕಿದರೆ ಮಾತ್ರ ಅದರ ಪ್ರಯೋಜನ ನಿಮಗೆ ದೊರೆಯುತ್ತದೆ.

Ad
Ad
Nk Channel Final 21 09 2023
Ad