Bengaluru 22°C
Ad

ರಾಶಿ ಭವಿಷ್ಯ; ಅನೇಕ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ

Horoscope

ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಹಾಗಿದ್ದರೆ, ಸೋಮವಾರ(ಜೂನ್. 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಎಂದು ನೋಡುವುದಾದರೇ,

Ad
300x250 2

ಸಿಂಹ ರಾಶಿ: ಇಂದು ಮನೆಯನ್ನು ನೋಡಿಕೊಳ್ಳುವ ಹೊಣೆ ನಿಮಗೆ ಸಿಗಲಿದೆ. ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ಅಪವಾದಗಳು ಬರಬಹುದು.‌ ನೀವು ದೊಡ್ಡ ವ್ಯಕ್ತಿಗಳ ಸಹವಾಸವನ್ನು ಮಾಡಿ ಬ್ಯುಸಿನೆಸ್ ಮಾಡಲು ಅವರ ಜೊತೆ ಚರ್ಚಿಸುವಿರಿ. ನಿಮ್ಮ ನಡೆ ಅನುಮಾನವನ್ನು ತರಿಸಬಹುದು.

ಕನ್ಯಾ ರಾಶಿ: ಇಂದು ನಿಮ್ಮ ಉದ್ಯಮದಲ್ಲಿ ಆದ ನಷ್ಟದಿಂದ ಮನಸಿನೊಳಗೆ ಸಂಕಟಪಡುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಇಂದು ಹೆಚ್ಚಿನ ಲಾಭವನ್ನು ನಿರೀಕ್ಷಿತ ಲಾಭವನ್ನು ಕಾಣಬಹುದಾಗಿದೆ. ಕಾರಣಾಂತರಗಳಿಂದ ಧನವ್ಯಯವಾದೀತು. ವಿದೇಶದಿಂದ ಹಣದ ವ್ಯವಹಾರವನ್ನು ಇಟ್ಟುಕೊಂಡರೆ ಕಷ್ಟವಾದೀತು. ನಿಮ್ಮ ಸ್ನೇಹಿತರ ನಡುವೆ ಬಾಂಧವದಲ್ಯವು ಬಲವಾಗಲಿದೆ. ಪರೀಕ್ಷೆಯನ್ನು ಎದುರಿಸಲು ಸಕಲರೀತಿಯಲ್ಲಿಯೂ ಸಜ್ಜಾಗಲಿದ್ದೀರಿ.

ತುಲಾ ರಾಶಿ: ನಿಮ್ಮ ಕಾರ್ಯದಕ್ಷತೆಗೆ ಜವಾಬ್ದಾರಿಗಳು ಬದಲಾಗಲಿವೆ. ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ಅವಕಾಶಗಳು ನಿಮ್ಮ ಕೈತಪ್ಪುವ ಸಾಧ್ಯತೆ ಇದೆ. ಇಷ್ಟು ದಿನ ಹಿಡಿದಿಟ್ಟುಕೊಂಡ ಕೋಪವು ಸ್ಫೋಟವಾಗಿ ಮನೆಯು ರಣಾಂಗಣದಂತೆ ಕಾಣಬಹುದು. ನೀವು ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಚಿಂತಿಸಿ.

ಧನು ರಾಶಿ: ಇಂದು ನಿಮ್ಮ ದಾಂಪತ್ಯದ ಬಿರುಕು ನ್ಯಾಯಾಲಯದ ಮೆಟ್ಟಿಲೇರಿಸಲೂಬಹುದು. ಆಸ್ತಿಯ ವಿಚಾರದಲ್ಲಿ ಕಲಹಗಳು ಉಂಟಾಗಬಹುದು. ನಿಮ್ಮ ಬಗ್ಗೆ ಅಪಪ್ರಚಾರಗಳು ಕೇಳಿ ಬರಬಹುದು. ಹಣಕಾಸಿನ ಅಧಿಕಾರಿಗಳು ನಿಮ್ಮ ಆದಾಯದ ಮೂವನ್ನು ವಿಚಾರಿಸಿಯಾರು. ಆಕರ್ಷಣೆಗೆ ಮನಸೋತು ದಾರಿ ಮೋಸ ಹೋಗಬಹುದು. ಆಸ್ತಿಯ ದಾಖಲೆಗಳನ್ನು ನೀವು ನೀಡಬೇಕಾದೀತು. ನಿಮ್ಮ ಗುರಿಯ ಕಡೆಗೆ ಹೆಚ್ಚಿನ ದೃಷ್ಟಿ ಇರಲಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ದೂರದ ಊರಿನಲ್ಲಿ ಅವಕಾಶ ಸಿಕ್ಕರೂ ಹೋಗಲು ಆಗದ ಸ್ಥಿತಿ ಇರುವುದು. ಅನೇಕ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ.

ಮಕರ ರಾಶಿ: ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳುವುದು ಔಚಿತ್ಯವಿಲ್ಲ. ಹಣದ ಪ್ರಾಮುಖ್ಯವನ್ನು ತಿಳಿದುಕೊಳ್ಳುವ ಸಮಯವಿಂದು. ನಿಮ್ಮ ವಿದ್ಯುದುಪಕರಣದಿಂದ ನಿಮಗೆ ನಷ್ಟವಾಗಲಿದೆ. ನಿಮ್ಮ ಶತ್ರುಗಳನ್ನು ನೀವು ಸಂಪೂರ್ಣವಾಗಿ ಸೋಲಿಸಿದ್ದೇನೆ ಎಂಬ ಭಾವನೆ ಇರಬಹುದು. ಆದರೆ ನಿಮ್ಮ ಉನ್ನತಿಯನ್ನು ಸಹಿಸದೇ ಮತ್ಯಾರೋ ಶತ್ರುಗಳಾಗುವರು. ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಪಾಲ್ಗೊಳ್ಳುವಿರಿ. ನಿಮ್ಮ ತೀರ್ಮಾನಕ್ಕೆ ಇತರರ ಬೆಂಬಲವೂ ಸಿಕ್ಕಿ ನಿಮಗೆ ಬಲಬಂದಂತಾಗುವುದು. ಮಕ್ಕಳ ಕಾರಣದಿಂದ ನಿಮಗೆ ನೀವು ತಲೆ ತಗ್ಗಿಸುವಿರಿ. ಬುದ್ಧಿವಾದವನ್ನು ಮಕ್ಕಳಿಗೆ ಹೇಳುವಿರಿ.

ಕುಂಭ ರಾಶಿ: ಸಜ್ಜನರ ಭೇಟಿಯಾಗುವ ಸಾಧ್ಯತೆ ಇದೆ. ಆಪ್ತರ ಜೊತೆ ಉದ್ಯೋಗಕ್ಕೆ ಸಂಬಂಧಿಸಿದ ಸಮಾಲೋಚನೆಯನ್ನು ನಡೆಸುವಿರಿ. ನಿಮ್ಮ ಶತ್ರುಗಳು ನಿಮ್ಮನ್ನು ಸೋಲಿಸಲು ತಯಾರಾಗಿರುವರು. ನಿಮ್ಮ ಬಳಿ ಇರುವ ಕೆಲವು ವಸ್ತುಗಳನ್ನು ಇನ್ನೊಬ್ಬರಿಗೆ ನೀಡುವಿರಿ. ನೀವು ಮಕ್ಕಳ ವೃತ್ತಿಜೀವನದ ಬಗ್ಗೆ ಹೆಚ್ಚು ಆತಂಕಪಡಬೇಕಾದ ಅವಶ್ಯಕತೆ ಇರುವುದಿಲ್ಲ‌. ಮುಳುಗುತ್ತಿರುವವನಿಗೆ ಸಣ್ಣ ಹುಲ್ಲು ಕಡ್ಡಿಯೂ ಆಸರೆಯೇ. ಆತ್ಮವಿಶ್ವಾಸದಿಂದ ನಿಮಗೆ ಇನ್ನಷ್ಟು ಬಲ ಬರಲಿದೆ. ಪ್ರವಾಸದಿಂದ ನಿಮಗೆ ಆಯಾಸವಾಗಲಿದೆ. ಜೋಪಾನಮಾಡಿ ಇಟ್ಟುಕೊಳ್ಳಿ. ಸಾಧಿಸುವ ಛಲವಿದ್ದರೂ ಪರಿಸ್ಥಿತಿ ಅನುಕೂಲವಾಗಿ ಇರದು.

ಮೀನ ರಾಶಿ: ಒತ್ತಡದ ನಡುವೆಯೂ ಕಾರ್ಯನಿರ್ವಹಣೆ ಮಾಡಿದ ಕೌಶಲಕ್ಕೆ ಪ್ರಂಶಸೆಗಳು ಸಿಗಲಿವೆ. ಹಣದ ಸಮಸ್ಯೆಗಳಿಂದ ಮುಕ್ತರಾಗುವಿರಿಸಿ. ಅನೇಕ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ಇಂದು ವಿದ್ಯಾರ್ಥಿಗಳು ದೂರದ ಊರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಲು ಚಿಂತಿಸುವರು. ಕಛೇರಿಯಲ್ಲಿ ಅತಿಯಾದ ಕಾರ್ಯನಿಮಿತ್ತ ನಿಮ್ಮ ಮುಖ್ಯ ಕೆಲಸವನ್ನೇ ಮರಡಯುವಿರಿ. ವ್ಯಾಪಾರಸ್ಥರಿಗೆ ಖ್ಯಾತಿಯೂ ಹಣವೂ ಸಿಗಲಿದೆ. ನಿಮ್ಮ ಧಾರ್ಮಿಕ ಭಾವನೆಗಳಿಗೆ ತೊಂದರೆ ಕೊಡಬಹುದು. ಯಾರಾದರೂ ತೊಂದ ಹೊಸ ಯೋಜನೆಯ ಕೆಲಸವನ್ನು ನೀವು ಪ್ರಾರಂಭಿಸುವಿರಿ.

Ad
Ad
Nk Channel Final 21 09 2023
Ad