Showing 20 of 280 posts • Page 13 of 14
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 22 ರಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2024 ಅನ್ನು ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅಧಿಕೃತ ದಿನಾಂಕದ ಬಗ್ಗೆ ಇನ್ನೂ ಖಚಿತವಾಗಿಲ್ಲ.
ದ್ವಿಚಕ್ರ ವಾಹನ ತಯಾರಕ ಕಂಪನಿ ಬಿಎಂಡಬ್ಲ್ಯು ಮೋಟೊರಾಡ್ R 1300 ಜಿಎಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
ಇಂದು ಬೆಳ್ಳಿ ಬೆಲೆ ಕಡಿಮೆಯಾಗಿದೆ. ಚಿನ್ನದ ಬೆಲೆಯೂ ಕಡಿಮೆ ಆಗುವ ಸಾಧ್ಯತೆ ಇದೆ. ವಿದೇಶಗಳ ಕೆಲವೆಡೆ ಚಿನ್ನದ ಬೆಲೆ ಅಲ್ಪ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,150 ರೂಪಾಯಿ ಇದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸತತ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ಈಗ 2024-25ರ ಹಣಕಾಸು ವರ್ಷಕ್ಕೆ ಹೊಸ ಸರ್ಕಾರದಿಂದ ಪೂರ್ಣಪ್ರಮಾಣದ ಬಜೆಟ್ ಮಂಡನೆ ಆಗಲಿದೆ.
ಜಾಗತಿಕ ಷೇರುಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಹಿನ್ನೆಲೆಯಲ್ಲಿ ಇಂದು (ಜೂನ್ 13) ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 300ಕ್ಕೂ ಅಧಿಕ ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ
ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ಇಂದು ದೇಶಾದ್ಯಂತ ಪೆಟ್ರೋಲ್ , ಡೀಸೆಲ್ ಬೆಲೆ ಸ್ಥಿರವಾಗಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆ ಎರಡೂ ಇಂದು ಏರಿಕೆ ಕಂಡಿದೆ. ಚಿನ್ನದ ಬೆಲೆ ಗ್ರಾಮ್ಗೆ 30 ರೂನಷ್ಟು ಹೆಚ್ಚಳವಾಗಿದೆ. ಬೆಳ್ಳಿ ಬೆಲೆ ಗ್ರಾಮ್ಗೆ 80 ಪೈಸೆ ಅಧಿಕಗೊಂಡಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಚಿನ್ನದ ಬೆಲೆ ಏರಿಕೆಯಾಗಿದೆ.
ಇವತ್ತು ಬೆಳ್ಳಿ ಬೆಲೆ ಕೊಂಚ ಕಡಿಮೆಯಾಗಿದೆ. ಚಿನ್ನದ ಬೆಲೆ ಮೂರು ದಿನಗಳ ಬಳಿಕ ಏರಿಕೆ ಆಗಿದೆ. ಭಾರತದಲ್ಲಿ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 65,850 ರೂಪಾಯಿ ಇದೆ.
ಇತ್ತೀಚೆಗೆ ಮನುಷ್ಯರಿಗಿಂತ ಹೆಚ್ಚು ವಾಹನಗಳ ಸಂಖ್ಯೆ ಹೆಚ್ಚಾಗಿದೆ ಅದರಿಂದ ಪಾರ್ಕಿಂಗ್ ಸ್ಥಳ ಕೂಡ ಇಲ್ಲದಂತಾಗಿದೆ. ಪಾರ್ಕಿಂಗ್ ಸಮಯದಲ್ಲಿ ನಮ್ಮ ವಾಹನವನ್ನು ಹುಡುಕುವುದೆ ಒಂದು ದೊಡ್ಡ ಟಾಸ್ಕ್ ಆಗಿರುತ್ತದೆ.
ಯೂರೋಪ್ನ ಶೆಂಗನ್ ವ್ಯಾಪ್ತಿಯ ದೇಶಗಳಿಗೆ ನೀವು ಪ್ರವಾಸ ಹೋಗುವುದಾದರೆ ಹೆಚ್ಚು ಶುಲ್ಕ ತೆರಬೇಕಾಗುತ್ತದೆ. ಯೂರೋಪಿಯನ್ ಕಮಿಷನ್ ಶೆಂಗನ್ ವೀಸಾ ಶುಲ್ಕವನ್ನು ಶೇ. 12ರಷ್ಟು ಹೆಚ್ಚಿಸಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಬಹುತೇಕ ಯಥಾಸ್ಥಿತಿಯಲ್ಲಿವೆ. ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ ಆಗಿದೆ. ಚಿನ್ನದ ಬೆಲೆ ಭಾರತದಲ್ಲಿ ನಿನ್ನೆಯಷ್ಟೇ ಇದೆ.
ದೇಶದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಚ್ಚಾಗಿವೆ. ಚಿನ್ನದ ಬೆಲೆ ಗ್ರಾಮ್ಗೆ 70 ರೂ ಏರಿಕೆ ಆಗಿದೆ. ಬೆಳ್ಳಿ ಬೆಲೆ 1.20 ರೂನಷ್ಟು ಹೆಚ್ಚಳ ಆಗಿದೆ.
ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ. ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನ ದಿನ ಬಾಂಬೆ ಷೇರು ಮಾರುಕಟ್ಟೆ, ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ.
ಮದರ್ ಡೈರಿಯು ದೆಹಲಿ-ಎನ್ಸಿಆರ್ನಲ್ಲಿ ಹಾಲಿನ ದರದಲ್ಲಿ ಲೀಟರ್ಗೆ 2 ರೂಪಾಯಿ ಹೆಚ್ಚಳ ಮಾಡಿದೆ. ಮಾರುಕಟ್ಟೆಗಳಲ್ಲಿ ಸೋಮವಾರದಿಂದಿಂದಲೇ ಹಾಲಿನ ಎಲ್ಲಾ ವಿಧಗಳ ಮೇಲೆ ಬೆಲೆ ಏರಿಕೆ ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಜೂನ್ 7ರಂದು ಸಭೆಯ ನಿರ್ಣಯಗಳನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಲಿದ್ದಾರೆ. ಕಳೆದ ಬಾರಿಯ ಎಂಪಿಸಿ ಸಭೆ ಏಪ್ರಿಲ್ ತಿಂಗಳಲ್ಲಿ ನಡೆದಿತ್ತು. ಈ ಹಣಕಾಸು ವರ್ಷದಲ್ಲಿ ಇದು ಎರಡನೇ ಸಭೆಯಾಗಲಿದೆ.
ರಾಜ್ಯದಲ್ಲಿ ಶುಕ್ರವಾರ ಕೆಎಂಎಫ್ ಇತಿಹಾಸದಲ್ಲಿಯೇ ಅತಿ ಹೆಚ್ಚು 94.26 ಲಕ್ಷ ಕೆಜಿ ಹಾಲು ಸಂಗ್ರಹವಾಗಿದ್ದು, ದಾಖಲೆ ಬರೆದಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ತಿಳಿಸಿದ್ದಾರೆ.
ದೇಶದ ಐಟಿ ವಲಯದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನಲ್ಲಿ ಖಾಲಿ ಇರುವ ಸಾವಿರಾರು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಇಂದು ವಿದೇಶಗಳ ಹಲವೆಡೆ ಚಿನ್ನದ ಬೆಲೆ ತುಸು ಹೆಚ್ಚಾಗಿದೆ. ಭಾರತ ಸೇರಿದಂತೆ ವಿವಿಧೆಡೆ ಬೆಳ್ಳಿ ಬೆಲೆ ತುಸು ಕಡಿಮೆ ಆಗಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರ ಮೊದಲ ಬಾರಿಗೆ ಪ್ರಮುಖ ಇಳಿಕೆ ಕಂಡಿವೆ. ಚಿನ್ನದ ಬೆಲೆ ಗ್ರಾಮ್ಗೆ 40 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ ಗ್ರಾಮ್ಗೆ ಎರಡೂವರೆ ರೂ ಅಗ್ಗವಾಗಿದೆ
ಸರ್ಕಾರದಿಂದ ನಿರ್ವಹಿಸಲಾಗುವ ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ ಜನಪ್ರಿಯವಾಗುತ್ತಿದೆ. 15 ವರ್ಷದ ಈ ಯೋಜನೆಯಲ್ಲಿ ಒಂದು ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಅವಕಾಶ ಇದೆ.