ನವದೆಹಲಿ : ದೇಶದಲ್ಲಿ ಉತ್ಪಾದಿಸುವ ಕಚ್ಚಾತೈಲದ ತೆರಿಗೆಯ ಲಾಭದಲ್ಲಿ ಸರ್ಕಾರ ಶನಿವಾರದಿಂದ(ಜೂನ್‌ 15) ಜಾರಿಗೆ ಬರುವಂತೆ ಪ್ರತಿ ಟನ್‌ಗೆ 5,200 ರೂ.ಗಳಿಂದ 3,250 ರೂ.ಗೆ ಇಳಿಸಿದೆ.

ಈ ತೆರಿಗೆಯನ್ನು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ರೂಪದಲ್ಲಿ ವಿಧಿಸಲಾಗುತ್ತದೆ. ಡೀಸೆಲ್, ಪೆಟ್ರೋಲ್ ಮತ್ತು ಜೆಟ್ ಇಂಧನ ಅಥವಾ ಎಟಿಎಫ್ ರಫ್ತಿನ ಮೇಲಿನ ಎಸ್ಎಇಡಿಯನ್ನು ‘ಶೂನ್ಯ’ದಲ್ಲಿ ಉಳಿಸಿಕೊಳ್ಳಲಾಗಿದೆ. ಹೊಸ ದರಗಳು ಜೂನ್ 15ರಿಂದ ಜಾರಿಗೆ ಬರಲಿವೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ಭಾರತವು ಮೊದಲ ಬಾರಿಗೆ 2022ರ ಜುಲೈ 1ರಂದು ಅನಿರೀಕ್ಷಿತ ಲಾಭ ತೆರಿಗೆಯನ್ನು ವಿಧಿಸಿತು. ಈ ಮೂಲಕ ಇಂಧನ ಕಂಪನಿಗಳ ಸೂಪರ್‌ ನಾರ್ಮಲ್‌ ಲಾಭಗಳಿಗೆ ತೆರಿಗೆ ವಿಧಿಸುವ ಹಲವು ರಾಷ್ಟ್ರಗಳ ಸಾಲಿಗೆ ಸೇರಿಕೊಂಡಿತು. ಹಿಂದಿನ ಎರಡು ವಾರಗಳ ಸರಾಸರಿ ತೈಲ ಬೆಲೆಗಳ ಆಧಾರದ ಮೇಲೆ ತೆರಿಗೆ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ.