Bengaluru 22°C
Ad

ಮಾರುಕಟ್ಟೆಯಲ್ಲಿ ಇವತ್ತಿನ ಚಿನ್ನ, ಬೆಳ್ಳಿ ಬೆಲೆಗಳೆಷ್ಟು?

Gold (1)

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ತುಸು ತುಸುವೇ ಇಳಿಕೆಯ ಹಾದಿಯಲ್ಲಿದೆ. ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಗ್ರಾಮ್​ಗೆ 1.20 ರೂನಷ್ಟು ಕಡಿಮೆ ಆಗಿದೆ. ಚಿನ್ನದ ಬೆಲೆ ಹತ್ತು ದಿನದಲ್ಲಿ ಗ್ರಾಮ್​ಗೆ 70 ರೂನಷ್ಟು ಕಡಿಮೆ ಆಗಿದೆ. ಫೆಡರಲ್ ರಿಸರ್ವ್ ಈ ವರ್ಷ ಬಡ್ಡಿದರ ಕಡಿತ ಮಾಡದಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುತ್ತಿದೆ.

ಬೆಲೆಯೂ ಸ್ವಲ್ಪ ಸ್ವಲ್ಪ ಇಳಿಕೆ ಕಾಣಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 65,900 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 71,890 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,050 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 65,900 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,040 ರೂಪಾಯಿಯಲ್ಲಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ನೋಡುವುದಾದರೇ,
ಬೆಂಗಳೂರು: 65,900 ರೂ., ಚೆನ್ನೈ: 66,500 ರೂ., ಮುಂಬೈ: 65,900 ರೂ., ದೆಹಲಿ: 66,050 ರೂ., ಕೋಲ್ಕತಾ: 66,150 ರೂ., ಕೇರಳ: 66,150 ರೂ., ಅಹ್ಮದಾಬಾದ್: 65,950 ರೂ., ಜೈಪುರ್: 66,050 ರೂ., ಲಕ್ನೋ: 66,050 ರೂ., ಭುವನೇಶ್ವರ್: 65,900 ರೂ ಇದೆ.

Ad
Ad
Nk Channel Final 21 09 2023
Ad