Showing 20 of 4469 posts • Page 37 of 224
ಅರಬ್ಬಿ ಸಮುದ್ರದಲ್ಲಿ ಭಾರಿ ಬಿರುಗಾಳಿ ಸಹಿತ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಮೇ 20 ರಿಂದ ಮೇ 25 ರವರೆಗೆ ಕರ್ನಾಟಕ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಮತ್ತು ಕೇಂದ್ರ ಗೃಹ ಸಚಿವಾಲಯದ ತುರ್ತು ಪ್ರತಿಕ್ರಿಯೆ ನಿಯಂತ್ರಣ ಕೊಠಡಿ (ಐಸಿಆರ್-ಇಆರ್) ಎಚ್ಚರಿಕೆ ನೀಡಿದೆ.
ನದಿಯಲ್ಲಿ ಈಜಲು ಹೋಗಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ಪಜಿರಡ್ಕದ ಬಳಿ ನಡೆದಿದೆ.
ಇಫ್ತಾರ್ ಕೂಟಕ್ಕೆ ಹಿಂದೂಗಳನ್ನು ಕರೆಸಿ ಸಮೋಸಾ – ಜ್ಯೂಸ್ ಕೊಟ್ಟರೆ ಮಾತ್ರ ಸೌಹಾರ್ದತೆ ಬರಲ್ಲ.
ಶಿವ ಸೇನಾ ಮತ್ತು ಸನಾತನ ಹಿಂದೂ ಸಂಘಟನೆಗಳ ಒಕ್ಕೂಟದೊಂದಿಗೆ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಗೆ ತೆರಳಿ ಹಿಜಾಬ್ ನಿಷೇಧ ಕಡ್ಡಾಯ ಗೊಳಿಸಬೇಕು ಮತ್ತು ಬಕ್ರೀದ್ ಹಬ್ಬದ ನೆಪದಲ್ಲಿ ಗೋ ಹತ್ಯೆಗೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ ಗೃಹ ಸಚಿವರಿಗೆ ಮನವಿ ಅರ್ಪಿಸಲಾಯಿತು.
ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಯಲ್ಲಿ ಸಾರ್ವಜನಿಕರ ಕುಂದು-ಕೊರತೆ ಆಲಿಸಿದರು.
ಸ್ಕೂಟರ್ ವಾಹನವು ನೀರಿನ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಕಾಪು ಪಣಿಯೂರ್ನಲ್ಲಿ ಸಂಭವಿಸಿದೆ.
ರಾಜ್ಯದಲ್ಲಿ ಮತ್ತೆ ಹಿಜಾಬ್ ಗೆ ಅವಕಾಶ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ವಿಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಕಿಡಿಕಾರಿದರು.
ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಎಸ್ ಟಿ ಪಿ ಐ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿಕೆ ನೀಡಿದರು.
ನಿನ್ನೆ ತಡರಾತ್ರಿ ಕಳ್ಳರು ಸರಣಿ ಕಳ್ಳತನ ನಡೆಸಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ಅಂಗಡಿ-ಕಚೇರಿಗಳ ಬೀಗ ಮುರಿದು ನಗದು ದೋಚಿ ಪರಾರಿಯಾಗಿರುವ ಘಟನೆ ಬೆಳ್ತಂಗಡಿ ನಗರ ಪ್ರದೇಶದಲ್ಲಿ ನಡೆದಿದೆ.
ಮಂಗಳೂರು ನಗರದ ಹೊರವಲಯದ ಪ್ರಮುಖ ಹೆದ್ದಾರಿ ಜಂಕ್ಷನ್ಗಳಾದ ಬೈಕಂಪಾಡಿ ಮತ್ತು ಕೂಳೂರು ಬಳಿ ಸುಗಮ ಸಂಚಾರ ಹಾಗೂ ಅಪಘಾತ ಮುಕ್ತ ವಲಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವದ ಕಾಮಗಾರಿಗಳಿಗೆ ಅನುಮೋದನೆ ನೀಡಿ ಅನುದಾನ ಮಂಜೂರು ಮಾಡಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಇಲ್ಲಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಅನಾಥ ಶವವೊಂದು ತೀವ್ರವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಕಿಡ್ ಆಗಿ ಬಸ್ ನ ಅಡಿಗೆ ಸ್ಕೂಟರ್ ಬಿದ್ದ ಘಟನೆ ಮಂಗಳೂರು ಕೊಣಾಜೆ ಪೊಲೀಸ್ ಠಾಣೆ ನಾಟೆಕಲ್ ಬಳಿ ಆದಿತ್ಯವಾರ ಸಂಜೆ ಘಟನೆ ನಡೆದಿದೆ.
ಕರಾವಳಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನಗರದ ಕುಂಟಿಕಾನ ಬಳಿಯ ಆನ್ಲೈನ್ ಡೆಲಿವರಿ ಸಂಸ್ಥೆಯೊಂದರ ಕಟ್ಟಡದ ಲಿಫ್ಟ್ನಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಮಲ್ಪೆ ಬೀಚ್ನಲ್ಲಿ ಮಂಗ್ಲಿಯ ಗಾನವೈಭವ ನಡೆಯಿತು. ಕೊಡವೂರು ಮಹಾರುದ್ರಯಾಗದ ಮೆರುಗನ್ನು ಮಂಗ್ಲಿಯ ಸಂಗೀತ ರಸಮಂಜರಿ ಹೆಚ್ಚಿಸಿತು.
ಮಲ್ಪೆಯ ಕರ್ಕೇರ ಗೆಸ್ಟ್ ಹೌಸಿನಲ್ಲಿದ್ದ ವೈವಿಧ್ಯಮಯ ಮೀನುಗಳನ್ನು ಕಂಡು ಖ್ಯಾತ ಹಾಡುಗಾರ್ತಿ ಮಂಗ್ಲಿ ಖುಷಿ ಪಟ್ಟರು.
ತಾಲೂಕಿನ ಕುರಿಯಾಳ ಎಂಬಲ್ಲಿ ಬಾವಿ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರನ್ನು ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬರಿಮಾರು ನಿವಾಸಿಗಳಾದ ಪದ್ಮನಾಭ(38) ಮತ್ತು ರಾಮಣ್ಣ(48) ಗಾಯಗೊಂಡವರು. ಭಾನುವಾರ ಸಂಜೆ ಈ ಘಟನೆ ನಡೆದಿದೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೆಲ್ಕಾರ್ ನಲ್ಲಿ ಸಂಚರಿಸುತ್ತಿದ್ದ ಲಾರಿಯೊಂದರಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡು ವಸ್ತುಗಳೆಲ್ಲವೂ ಭಸ್ಮಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ಎಸ್.ಸಿ.ಎಸ್ ಆಸ್ಪತ್ರೆಯಲ್ಲಿ ಮೇ.16 ರಂದು ಸಾರ್ವಜನಿಕರಲ್ಲಿ ಸರಿಯಾದ ಪೌಷ್ಠಿಕ ಆಹಾರ, ಆರೋಗ್ಯಕರ ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಉಚಿತ ಆಹಾರ ಮತ್ತು ಪೌಷ್ಠಿಕತೆ ಜಾಗೃತಿ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಮಂಗಳೂರಿನಲ್ಲಿ ಹೈಕೋರ್ಟ್ನ ಸಂಚಾರಿ ಪೀಠ ಅಥವಾ ಶಾಶ್ವತ ಪೀಠ ಸ್ಥಾಪಿಸಬೇಕೆಂಬ ಬೇಡಿಕೆ ಕೇವಲ ವಕೀಲರದ್ದಲ್ಲ, ಇಡೀ ಕರಾವಳಿ ಭಾಗದ ಸಾರ್ವಜನಿಕರ ನ್ಯಾಯಸಮ್ಮತ ಹಕ್ಕಿನ ಬೇಡಿಕೆಯಾಗಿದ್ದು ಇದಕ್ಕೆ ಮನ್ನಣೆಯನ್ನು ರಾಜ್ಯದ ಮುಖ್ಯ ಮಂತ್ರಿಗಳು ನೀಡಿದ್ದು ಅಕ್ಟೋಬರ್ ತಿಂಗಳ ಒಳಗಾಗಿ ನಗರದ ಹಳೆ ಡಿಸಿ ಕಚೇರಿಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಯಾಗಲಿದೆ