Bengaluru 23°C
Ad

ಬ್ಯಾಂಕ್ ಮುಂಭಾಗದಲ್ಲಿ ಜನಜಂಗುಳಿ : ಉಸಿರುಗಟ್ಟಿ ರೈತ ಮೂರ್ಛೆ

ಜಿಲ್ಲೆಯ ಸುರಪುರ ನಗರದಲ್ಲಿರುವ ಡಿಸಿಸಿ ಮುಂಭಾಗದಲ್ಲಿ ಜನ ಜಂಗುಳಿಯಿಂದಾಗಿ ಸರತಿ ಸಾಲಿನಲ್ಲಿ ನಿಂತಿದ್ದ ರೈತನೋರ್ವ ಉಸಿರುಗಟ್ಟಿ ಮೂರ್ಛೆ ಹೋಗಿರುವ ಘಟನೆ ನಡೆದಿದೆ.

ಯಾದಗಿರಿ : ಜಿಲ್ಲೆಯ ಸುರಪುರ ನಗರದಲ್ಲಿರುವ ಡಿಸಿಸಿ ಮುಂಭಾಗದಲ್ಲಿ ಜನ ಜಂಗುಳಿಯಿಂದಾಗಿ ಸರತಿ ಸಾಲಿನಲ್ಲಿ ನಿಂತಿದ್ದ ರೈತನೋರ್ವ ಉಸಿರುಗಟ್ಟಿ ಮೂರ್ಛೆ ಹೋಗಿರುವ ಘಟನೆ ನಡೆದಿದೆ.

ಹದನೂರು ಗ್ರಾಮದ ರೈತ ಬಸವಂತಪ್ಪ ತಮ್ಮ ಖಾತೆಗೆ ಜಮಾ ಆಗಿರುವ ಹಣವನ್ನು ಪಡೆದುಕೊಳ್ಳಲು ಬ್ಯಾಂಕ್ ಗೆ ಆಗಮಿಸಿದ್ದಾರೆ. ಕಳೆದ ಒಂದು ವಾರದಿಂದಲೂ ಡಿಸಿಸಿ ಬ್ಯಾಂಕ್ ಜನಜಂಗುಳಿಯಿಂದ ತುಂಬಿದ್ದು. ಹಣ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ರೈತ ಮೂರ್ಛೆ ಹೋಗಿದ್ದಾರೆ.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ರೈತನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸುರಪುರ ಮತ್ತು ಹುಣಸಗಿ ಅವಳಿ ತಾಲೂಕಿನ ರೈತರಿಗೆ ಕೇವಲ ಒಂದೇ ಒಂದು ಡಿಸಿಸಿ ಬ್ಯಾಂಕ್ ಇರುವುದರಿಂದ, ರೈತರು ತಮ್ಮ ಕೆಲಸಕ್ಕಾಗಿ ದಿನನಿತ್ಯದ ಡಿಸಿಸಿ ಬ್ಯಾಂಕ್ ಗೆ ಬರುತ್ತಿದ್ದಾರೆ ಇದರಿಂದಾಗಿ ಬ್ಯಾಂಕಿನಲ್ಲಿ ಹೆಚ್ಚಿನ ಜನಸಂದಣೆ ಉಂಟಾಗಿದೆ.

ಈ ಕೂಡಲೇ ಹೋಬಳಿವಾರು ಡಿಸಿಸಿ ಬ್ಯಾಂಕ್ ಗಳನ್ನು ಸ್ಥಾಪಿಸುವಂತೆ ರೈತ ಸಂಘಟನೆ ಮುಖಂಡರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

Ad
Ad
Nk Channel Final 21 09 2023
Ad