Bengaluru 25°C
Ad

ಕಂಬ ಜೋಡಣೆ ವೇಳೆ ದಿಢೀರ್‌ ವಿದ್ಯುತ್ ಪ್ರವಹಿಸಿ ಕಾರ್ಮಿಕ ಗಂಭೀರ

ಭಾರಿ ಮಳೆಗೆ ವಿದ್ಯುತ್‌ ಕಂಬ ಮುರಿದು ಬಿದ್ದಿತ್ತು. ಕಂಬ ಜೋಡಣೆ ಮಾಡುವಾಗ ಎಡವಟ್ಟಾಗಿದ್ದು, ಕಂಬ ಏರಿ ರಿಪೇರಿ ಕೆಲಸ ಮಾಡುವಾಗ ಕಾರ್ಮಿಕನಿಗೆ ದಿಢೀರ್‌ ವಿದ್ಯುತ್ ಪ್ರವಹಿಸಿ ಒದ್ದಾಡಿದ ಘಟನೆ ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ನಡೆದಿದೆ.

ಯಾದಗಿರಿ: ಭಾರಿ ಮಳೆಗೆ ವಿದ್ಯುತ್‌ ಕಂಬ ಮುರಿದು ಬಿದ್ದಿತ್ತು. ಕಂಬ ಜೋಡಣೆ ಮಾಡುವಾಗ ಎಡವಟ್ಟಾಗಿದ್ದು, ಕಂಬ ಏರಿ ರಿಪೇರಿ ಕೆಲಸ ಮಾಡುವಾಗ ಕಾರ್ಮಿಕನಿಗೆ ದಿಢೀರ್‌ ವಿದ್ಯುತ್ ಪ್ರವಹಿಸಿ ಒದ್ದಾಡಿದ ಘಟನೆ ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ನಡೆದಿದೆ.

Ad

ಗಂಭೀರ ಗಾಯಗೊಂಡ ಕಾರ್ಮಿಕ ರಾಯಪ್ಪ ಎಂಬಾತನನ್ನು ಸ್ಥಳೀಯರು ರಕ್ಷಿಸಿ ಕಲಬುರಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಲೈನ್ ಬಂದ್ ಮಾಡಿ ಕೆಲಸ ಮಾಡುತ್ತಿದ್ದಾಗ ಏಕಾಎಕಿ ವಿದ್ಯುತ್‌ ಹರಿದಿದೆ.

Ad

ಕಾರ್ಮಿಕ ರಾಯಪ್ಪ ನಿಯಂತ್ರಣ ತಪ್ಪಿದ್ದು ಕಂಬದಲ್ಲಿ ನೇತಾಡಿ ಸಹಾಯಕ್ಕಾಗಿ ಅಂಗಲಾಚಿದ್ದಾನೆ. ನಂತರ ವಿದ್ಯುತ್ ಬಂದ್ ಮಾಡಿಸಿ ಸ್ಥಳೀಯರೇ ವಿದ್ಯುತ್‌ ಕಂಬ ಏರಿ ಕಾರ್ಮಿಕನ‌ನ್ನು ರಕ್ಷಣೆ ಮಾಡಿದ್ದಾರೆ.

Ad

ಕೆಂಭಾವಿ ವಿಭಾಗದ ಜೆಸ್ಕಾಂ ‌ಸಿಬ್ಬಂದಿ ಬೇಜವಾಬ್ದಾರಿತನ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Ad
Ad
Ad
Nk Channel Final 21 09 2023