Bengaluru 29°C
Ad

ಭಾರಿ ಮಳೆ : ನೀರು ತರಲು ಹೋದ ಮಹಿಳೆಗೆ ಕಾದಿತ್ತು ಗ್ರಹಚಾರ

ಭಾರಿ ಮಳೆ ಮತ್ತು ಗಾಳಿಗೆ ಆಗಿರುವ ಅವಾಂತರ ಒಂದೆರಡಲ್ಲ. ಆ ಮಳೆಯಲ್ಲೂ ನೀರು ತರಲು ಹೋಗಿದ್ದ ಮಹಿಳೆ ಮರ ಬಿದ್ದು ಸಾವನ್ನಪ್ಪಿರುವ ಘಟನೆ ನಾರಾಯಣಪುರ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.

ಯಾದಗಿರಿ: ಭಾರಿ ಮಳೆ ಮತ್ತು ಗಾಳಿಗೆ ಆಗಿರುವ ಅವಾಂತರ ಒಂದೆರಡಲ್ಲ. ಆ ಮಳೆಯಲ್ಲೂ ನೀರು ತರಲು ಹೋಗಿದ್ದ ಮಹಿಳೆ ಮರ ಬಿದ್ದು ಸಾವನ್ನಪ್ಪಿರುವ ಘಟನೆ ನಾರಾಯಣಪುರ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಬಿರುಗಾಳಿ ಸಹಿತ ಮಳೆ ಹಿನ್ನಲೆ ನೀರು ತರಲು ಹೋದ ಶ್ವೇತಾ ರಾಠೋಡ(21) ಮೇಲೆ ಮರ ಬಿದ್ದಿದೆ.ಗಂಭೀರ ಗಾಯಗೊಂಡ ಶ್ವೇತಾ ಅವರನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಶ್ವೇತಾ ರಾಠೋಡ ಸಾವನ್ನಪ್ಪಿದ್ದಾರೆ.

Ad
Ad
Nk Channel Final 21 09 2023
Ad