News Karnataka Kannada
Friday, April 19 2024
Cricket
ಚಾಮರಾಜನಗರ

ಏ.1ರಿಂದ 7ರವರೆಗೆ  ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಜಾತ್ರೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ  ಐತಿಹಾಸಿಕ ಹಿಮವದ್ ಗೋಪಾಲಸ್ವಾಮಿ  ಬೆಟ್ಟದಲ್ಲಿ ಈ ಬಾರಿಯ ಜಾತ್ರಾ ಮಹೋತ್ಸವ ಏ.1ರಿಂದ ಆರಂಭವಾಗಿ ಏ.7ರವರೆಗೆ  ನಡೆಯಲಿದ್ದು, ಒಂದು ವಾರಗಳ ಕಾಲ ನಡೆಯುವ ಜಾತ್ರೆಗೆ ಸರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
Photo Credit : NewsKarnataka

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ  ಐತಿಹಾಸಿಕ ಹಿಮವದ್ ಗೋಪಾಲಸ್ವಾಮಿ  ಬೆಟ್ಟದಲ್ಲಿ ಈ ಬಾರಿಯ ಜಾತ್ರಾ ಮಹೋತ್ಸವ ಏ.1ರಿಂದ ಆರಂಭವಾಗಿ ಏ.7ರವರೆಗೆ  ನಡೆಯಲಿದ್ದು, ಒಂದು ವಾರಗಳ ಕಾಲ ನಡೆಯುವ ಜಾತ್ರೆಗೆ ಸರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಈ ಬಾರಿ ಜಾತ್ರಾ ಮಹೋತ್ಸವವು ಏಪ್ರಿಲ್ 1ರಿಂದ ಆರಂಭವಾಗಿ ಏ.7ರವರೆಗೆ ನಡೆಯಲಿದೆ. ಈ ನಡುವೆ ಬಲು  ಆಕರ್ಷಕ ಮತ್ತು ವಿಶೇಷವಾಗಿರುವ ಗೋಪಾಲಸ್ವಾಮಿಯ ಬ್ರಹ್ಮರಥೋತ್ಸವವು ಏ.4ರಂದು ನಡೆಯಲಿದೆ.

ಜಾತ್ರಾ ಸಮಯದಲ್ಲಿ ಒಂದೊಂದು ದಿನವೂ ಮಹತ್ವದಾಗಿದ್ದು, ಪ್ರತಿದಿನವೂ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಅದರಂತೆ ಯಾವ ದಿನ ಏನು ವಿಶೇಷ ಕಾರ್ಯಕ್ರಮ ನಡೆಯುತ್ತದೆ ಎನ್ನುವುದನ್ನು ನೋಡುವುದಾದರೆ, ಏ.1ರಂದು ಗೋಪಾಲಸ್ವಾಮಿಗೆ ಫಲ ಪಂಚಾಮೃತಾಭಿಷೇಕ, ಆದಿವಾಸರ, ಅಂಕುರಾರ್ಪಣ ಗರುಡ ಪ್ರತಿಷ್ಠಾ ರಕ್ಷಾಬಂಧನ ಕಾರ್ಯಕ್ರಮದೊಂದಿಗೆ ಜಾತ್ರೆಗೆ ಆರಂಭ ದೊರೆಯಲಿದೆ.

ಏ.2ರಂದು ಉತ್ಸವ, ಪಷ್ಪಬಲಿ, ಧ್ವಜಾರೋಹಣ, ಭೇರಿತಾಡನ ಯಾಗಶಾಲಾ ಪ್ರವೇಶ ನಡೆದರೆ, ಏ.3ರಂದು  ಗೋಪಾಲಸ್ವಾಮಿಯ ಉತ್ಸವ, ಕಾಶಿಯಾತ್ರಾ ಉತ್ಸವ, ಸಂಬಂಧ ಮಾಲಾಪೂರ್ವಕ, ರುಕ್ಮಿಣಿ ಸತ್ಯಭಾವ ಸಹಿತ ಗೋಪಾಲಸ್ವಾಮಿಯವರ ದಿವ್ಯಕಲ್ಯಾಣೋತ್ಸವ ನಡೆಯಲಿದೆ.  ಇನ್ನು ಏ.4ರಂದು ಬೆಳಿಗ್ಗೆ ಬ್ರಹ್ಮ ರಥೋತ್ಸವ ನಡೆಯಲಿದ್ದು, ಸಂಜೆ ಶಾಂತ್ಯುತ್ಸವ ಜರುಗಲಿದೆ.

ಏ.5ರಂದು ಉತ್ಸವ ಕೈಂಕರ್ಯ ಮತ್ತು ಬೆಳ್ಳಿ ಗರುಡೋತ್ಸವ, ಡೋಲೋತ್ಸವ, ಶಯನೋತ್ಸವ,  6ರಂದು ಸಂಧಾನ ಲೀಲೋತ್ಸವ, ಅವಭೃತ ಸ್ನಾನ ಉತ್ಸವ, ಫಣಿಮಾಲಾ ಪ್ರಬಂಧ ಸೇವೆ, ಪೂರ್ಣಾಹುತಿ ನಡೆಯಲಿದ್ದು, ಜಾತ್ರೆಯ ಕೊನೆಯ ಹಂತವಾಗಿ ಏ.7ರಂದು ಮಹಾಭಿಷೇಕ, ಮಹಾ ಮಂಗಳಾರತಿ, ದ್ವಾದಶಾರಾಧನಾ, ಪುಷ್ಪಯಾಗ, ಧ್ವಜಾವರೋಹಣ, ಉಧ್ವಾಸನ ಪ್ರಬಂಧ ಸೇವೆ, ಸೇತು ಸೇವೆ, ಮೂಕಬಲಿ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

ಜಾತ್ರೆ ಸಂದರ್ಭ ನಾಲ್ಕನೇ ದಿನ ನಡೆಯಲಿರುವ ಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಬಲು ಪ್ರಸಿದ್ಧಿ ಪಡೆದಿದ್ದು, ಈ ವೇಳೆ ಗೋಪಾಲಸ್ವಾಮಿಯ ಉತ್ಸವ ಮೂರ್ತಿಯನ್ನು ಬ್ರತಹತ್ ರಥದಲ್ಲಿ ಪ್ರತಿಷ್ಠಾಪಿಸಿ ಕಾಡಿನಿಂದ ತರಲಾದ ಬೆತ್ತ ಮತ್ತು  ಇತರೆ ಬಳ್ಳಿಗಳ ಸಹಾಯದಿಂದ ಎಳೆಯಲಾಗುತ್ತದೆ. ಈ ವೇಳೆ ಹಣ್ಣು ಧವನ ಎಸೆದು ನೆರೆದ ಭಕ್ತರು ಹರಕೆ ತೀರಿಸುತ್ತಾರೆ. ಈ ವೇಳೆ ಗೋಪಾಲಸ್ವಾಮಿಗೆ ಜೈಕಾರ ಮುಗಿಲು ಮುಟ್ಟುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು