Bengaluru 25°C
Ad

‌ ಬಾರ್​ನಲ್ಲಿ ಕಾಣಿಸಿಕೊಂಡ ಮಾಜಿ ಕ್ಯಾಪ್ಟನ್ ಧೋನಿ: ವಿಡಿಯೋ ವೈರಲ್

Msdhoni

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಮ್.‌ ಎಸ್ ಧೋನಿ ಅವರು ಬಾರ್‌ ನಲ್ಲಿರುವ ವಿಡಿಯೋವೊಂದು ವೈರಲ್ ಆಗಿದೆ. ‌ ಆರ್​ಸಿಬಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸೋತ ಬಳಿಕ ಸಿಎಸ್​ಕೆ ತಂಡವು ಐಪಿಎಲ್ 2024 ರಿಂದ ಹೊರಬಿದ್ದಿದೆ.

ಈ ಸೋಲಿನ ಬಳಿಕ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಬಾರ್​ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಟ್ಯಾಗ್​ಲೈನ್​ನೊಂದಿಗೆ ವಿಡಿಯೋ ವೈರಲ್ ಆಗಿದೆ.

ಆದರೆ ಈ ವಿಡಿಯೋ ಇತ್ತೀಚಿನದಲ್ಲ. ಏಕೆಂದರೆ ಸಿಎಸ್​ಕೆ ತಂಡದ ಸೋಲಿನ ಬಳಿಕ ಹತಾಶರಾಗಿದ್ದ ಧೋನಿ ಅಂದೇ ತವರಿಗೆ ತೆರಳಿದ್ದರು ಎಂದು ವರದಿಯಾಗಿತ್ತು. ಹೀಗಾಗಿ ಆರ್​ಸಿಬಿ ವಿರುದ್ಧದ ಸೋಲಿನ ಬಳಿಕ ಜಡೇಜಾ ಜೊತೆ ಬಾರ್​ನಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆಯಿಲ್ಲ ಎನ್ನಲಾಗ್ತಿದೆ.

ಆದರೂ ಒಂದು ಕಡೆ ನೋಡುವುದಾದರೇ ಈ ವಿಡಿಯೋ ಈ ಬಾರಿಯ ಐಪಿಎಲ್ ಸಂದರ್ಭದ್ದು ಎಂಬುದು ವಿಶೇಷ. ಏಕೆಂದರೆ ಧೋನಿ ಹಲವು ವರ್ಷಗಳ ಬಳಿಕ ಉದ್ದನೆಯ ಕೂದಲಿನೊಂದಿಗೆ ಕಾಣಿಸಿಕೊಂಡಿದ್ದರು. ಈ ವಿಡಿಯೋದಲ್ಲೂ ಲಾಂಗ್ ಹೇರ್ ಸ್ಟೈಲ್​ ಅನ್ನು ಕಾಣಬಹುದು. ಹೀಗಾಗಿ ಇದು ಈ ಬಾರಿಯ ಐಪಿಎಲ್ ವೇಳೆ ಸೆರೆ ಹಿಡಿಯಲಾದ ವಿಡಿಯೋ ಎಂಬುದು ಸ್ಪಷ್ಟವಾಗಿದೆ.

ಸದ್ಯ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಬಾರ್​ನಲ್ಲಿ ಚಿಲ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ನಾನಾ ರೀತಿಯ ಮೀಮ್ಸ್​ಗಳು ಕೂಡ ಹರಿದಾಡಲಾರಂಭಿಸಿದೆ.

 

 

Ad
Ad
Nk Channel Final 21 09 2023
Ad