Bengaluru 27°C
Ad

ಒಂದೆ ಮನೆಯ ತಾಯಿ, ಮಗಳು ,ಮೊಮ್ಮಗನ ನಿಗೂಢ ಸಾವು : ಕೊಲೆ ಶಂಕೆ

ಒಂದೇ ಮನೆಯ ಮೂವರು ಅನುಮಾಸ್ಪದವಾಗಿ ಸಾವನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿಯೇ ತಾಯಿ, ಮಗಳು ಹಾಗೂ ಮೊಮ್ಮಗನ ಮೃತದೇಹಗಳು‌ ಪತ್ತೆಯಾಗಿವೆ. ರಾಜೇಶ್ವರಿ (45), ವಸಂತಾ (22) ಹಾಗೂ ಸಾಯಿ (4) ಮೃತ ದುರ್ದೈವಿಗಳು.

ಕೊಪ್ಪಳ: ಒಂದೇ ಮನೆಯ ಮೂವರು ಅನುಮಾಸ್ಪದವಾಗಿ ಸಾವನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿಯೇ ತಾಯಿ, ಮಗಳು ಹಾಗೂ ಮೊಮ್ಮಗನ ಮೃತದೇಹಗಳು‌ ಪತ್ತೆಯಾಗಿವೆ. ರಾಜೇಶ್ವರಿ (45), ವಸಂತಾ (22) ಹಾಗೂ ಸಾಯಿ (4) ಮೃತ ದುರ್ದೈವಿಗಳು.

ಮೂವರ ಸಾವಿಗೆ ನಿಖರ ಇನ್ನು ತಿಳಿದು ಬಂದಿಲ್ಲ ಆದರೂ ಯಾರೋ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಯಾವುದೇ ಚಟುವಟಿಕೆ ಕಾಣದ ಸ್ಥಳೀಯರು ಮನೆಗೆ ತರಳಿದ್ದಾರೆ ಆಗ ಬೆಡ್ ರೂಮ್‌ನಲ್ಲಿ ಮಲಗಿದ್ದಲ್ಲಿ ಅಜ್ಜಿ ಮತ್ತು ಮೊಮ್ಮಗನ ಶವಗಳು ಪತ್ತೆಯಾದರೆ, ಮಗಳು ವಸಂತಾಳ ಶವ ಅಡುಗೆ ಮನೆಯಲ್ಲಿತ್ತು.

ಮೃತಪಟ್ಟ ವಸಂತಾ ಮೊದಲನೇ ಗಂಡನಿಗೆ ವಿಚ್ಛೇದನ ನೀಡಿದ್ದರು. ಇದಾದ ಬಳಿಕ ಮತ್ತೊಂದು ಮದುವೆಯಾಗಿದ್ದಳು. ವಸಂತಾ ತನ್ನ ಮಗನ ಜೊತೆ ಕಳೆದ 7 ತಿಂಗಳಿಂದ ಹೊಸಲಿಂಗಾಪುರದ ತಾಯಿ ಮನೆಯಲ್ಲೇ ವಾಸ ಮಾಡುತ್ತಿದ್ದರು.

ಸದ್ಯ ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

Ad
Ad
Nk Channel Final 21 09 2023
Ad