Bengaluru 22°C
Ad

ಮೋದಿ ಮತ್ತೊಮ್ಮೆ ಗೆದ್ದರೆ ತಮ್ಮ ದೇಗುಲ ಕಟ್ಟಿಕೊಳ್ಳುತ್ತಾರೆ: ಶಿವರಾಜ ತಂಗಡಗಿ ಲೇವಡಿ

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗೆದ್ದರೆ ತಮ್ಮ ದೇಗುಲ ಅಂತಾ ಕಟ್ಟಿಕೊಳ್ಳುತ್ತಾರೆ. ಯಾಕೆ ಅಂದರೆ ಮೋದಿ ಸ್ಟೇಟ್​​ಮೆಂಟ್​​ಗಳು ಹಾಗೆ ಇವೆ ಎಂದು ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದ್ದಾರೆ.

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗೆದ್ದರೆ ತಮ್ಮ ದೇಗುಲ ಅಂತಾ ಕಟ್ಟಿಕೊಳ್ಳುತ್ತಾರೆ. ಯಾಕೆ ಅಂದರೆ ಮೋದಿ ಸ್ಟೇಟ್​​ಮೆಂಟ್​​ಗಳು ಹಾಗೆ ಇವೆ ಎಂದು ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದ್ದಾರೆ.

ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ ಅಂತಾ ಮೋದಿ ಹೇಳುತ್ತಾರೆ. ಜನ ಮತ್ತೊಮ್ಮೆ ಅವಕಾಶ ಕೊಟ್ಟರೆ ಮೋದಿ ದೇಗುಲ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಬಹುದು. ಪ್ರತಿ ಊರಲ್ಲಿ ಪ್ರಧಾನಿ ಮೋದಿ ದೇವಸ್ಥಾನ ಕಟ್ಟಿ ಅನ್ನೋ ಸ್ಥಿತಿ ಬರುತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ.

ಕೊಪ್ಪಳದ ಕಾರಟಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುರಿಜಗನ್ನಾಥರು ಮೋದಿ ಭಕ್ತರು ಅಂತಾರೆ, ಎಲ್ಲಿಗೆ ಬಂದಿದೆ ಸ್ಥಿತಿ. ನಾವು ಜನಪ್ರತಿನಿಧಿಗಳು ದೇವರಾಗೋಕಾಗತ್ತಾ ಎಂದು ಪ್ರಶ್ನಿಸಿದ್ದಾರೆ.

ಮೋದಿ ಸಬ್ ಕಾ ಸಾಥ್ ಅಂತಾರೆ, ವೇದಿಕೆಯಲ್ಲಿ ಹಿಂದುತ್ವ ಅಂತಾರೆ, ಇಂತಹ ಮಾತನ್ನು ಹಿಂದಿನ ಯಾವ ಪ್ರಧಾನಮಂತ್ರಿಯೂ ಮಾತಾಡಿಲ್ಲ. ಇದು ನರೇಂದ್ರ ಮೋದಿ ಅವರ ಅಹಂಕಾರದ ಕೊನೆಯ ಹಂತ ಎಂದು ಕಿಡಿಕಾರಿದ್ದಾರೆ.

Ad
Ad
Nk Channel Final 21 09 2023
Ad