ಕಾರ್ಕಳ: ಮಹಿಳೆಯೋರ್ವರು ತಾನು ದುಡಿಯುತ್ತಿದ್ದ ಬ್ಯಾಂಕ್ ನಲ್ಲಿ ಜುಲಾಯಿ 14ರ ಬೆಳಿಗ್ಗೆ ಆತ್ಮಹತ್ಯೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಕಾರಣನಾದ ಆರೋಪಿ ಸಂತೋಷ್ ಯಾನೆ ಹರಿತನಯ ದೇವಾಡಿಗ ಈದು ಗ್ರಾಮದ ಹಾಡಿಯಲ್ಲಿ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಾರ್ಕಳ ಮಾರ್ಕೆಟ್ ರೋಡ್ ನ ಮಹಿಳಾ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮೀಳಾ ಎಂಬಾಕೆಗೆ ರೂ. 3 ಲಕ್ಷ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದನು.
ಆತನ ಕಿರುಕುಳದಿಂದಾಗಿ ಮಾನಸಿಕವಾಗಿ ನೊಂದಿದ್ದ ಬ್ಯಾಂಕ್ ಸಿಬ್ಬಂದಿ ಪ್ರವೀಳಾ ಜುಲಾಯಿ 14ರ ಬೆಳಿಗ್ಗೆ ಮನೆಯಿಂದ ಬ್ಯಾಂಕ್ ಗೆ ಆಗಮಿಸಿ ಅಲ್ಲಿಯೇ ಆತ್ಮಹತ್ಯೆ ಗೈದಿದ್ದರು.
ಈ ಕುರಿತಂತೆ ಪ್ರಮೀಳಾ ಸಹೋದರ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿತ್ತು. ಶನಿವಾರದಿಂದ ನಾಪತ್ತೆಯಾಗಿದ್ದ ಇದೀಗ ಈದು ಮಾಪಾಲು ಹಾಡಿಯೊಂದರಲ್ಲಿ ಸಂತೋಷ್ ಶವ ಆತ್ಮಹತ್ಯೆಗೈದ ರೀತಿಯಲ್ಲಿ ಪತ್ತೆಯಾಗಿದೆ. ಸಂತೋಷ್ ಯಾನೆ ಹರಿತನಯ ಪತ್ನಿ ಹಾಗೂ ಪುಟ್ಟ ಮಗುವನ್ನು ಅಗಲಿದ್ದಾನೆ.