ಕಾರ್ಕಳ: ಫೆ.18ರಂದು ಬೆಳಿಗ್ಗೆ ಸಮಯದಲ್ಲಿನಂದಳಿಕೆ ಗ್ರಾಮ ಪಂಚಾಯತ್ ನ ಎದುರು ಭಾಗದ ಬಾವಿಗೆ ಬಿದ್ದಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಬೋಜ (60) ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು.
ಮಾಹಿತಿ ಪಡೆದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಬಾವಿಯಿಂದ ಮೇಲೆಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿರುತ್ತಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ದಾಫೆದರ್ ರೂಪೇಶ್, ಸಿಬ್ಬಂದಿಗಳಾದ ಚಂದ್ರಶೇಖರ್, ಕೇಶವ್, ನಿತ್ಯಾನಂದ, ಸಂಜಯ್ ಪಾಲ್ಗೊಂಡಿದ್ದರು.