News Karnataka Kannada
Sunday, May 19 2024
ಮಂಗಳೂರು

ರಾಯಿ: ಸರ್ಕಾರಿ ಶಾಲೆ ಅಭಿವೃದ್ಧಿಗೆ ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ಸಿದ್ಧತೆ

Rai: Swami Vivekananda Friends Circle gears up for development of Government Higher Primary School
Photo Credit : By Author

ರಾಯಿ: ಸುಮಾರು 60 ವರ್ಷಗಳ ಹಿನ್ನೆಲೆ ಹೊಂದಿರುವ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದು, ಈ ಸರ್ಕಾರಿ ಶಾಲೆ ಉಳಿಸಿ ಬೆಳೆಸಲು ಇಲ್ಲಿನ ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ಸಿದ್ಧತೆ ನಡೆಸಿದೆ ಎಂದು ಸಂಘದ ಸ್ಥಾಪಕಾಧ್ಯಕ್ಷ, ಮಾಜಿ ಗ್ರಾ.ಪಂ.ಅಧ್ಯಕ್ಷ ಹರೀಶ ಆಚಾರ್ಯ ಹೇಳಿದ್ದಾರೆ.

ಇಲ್ಲಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಎರಡನೇ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಎಲ್ ಕೆ ಜಿ, ಯುಕೆಜಿ ಶಿಕ್ಷಣ ಆರಂಭಿಸಲು ಪ್ರತ್ಯೇಕ ಶಿಕ್ಷಕಿಯರ ನೇಮಕ ಸಹಿತ ಮಕ್ಕಳಿಗೆ ಪಠ್ಯದ ಜೊತೆಗೆ ಸಂಗೀತ, ಚಿತ್ರಕಲೆ, ಭರತನಾಟ್ಯ, ಯಕ್ಷಗಾನ ಮತ್ತಿತರ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲು ವಿವಿಧ ಸಂಘ ಸಂಸ್ಥೆ ಮತ್ತು ದಾನಿಗಳ ನೆರವು ಪಡೆಯುವುದಾಗಿ ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಚಂದ್ರಶೇಖರ ಗೌಡ ಕಾರಂಬಡೆ, ಗ್ರಾ.ಪಂ.ಸದಸ್ಯ ಸಂತೋಷ್ ಗೌಡ, ಉಷಾ ಸಂತೋಷ್ ಸಪಲ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಗೌಡ, ಉಪನ್ಯಾಸಕಿ ರೂಪಾ ಹರೀಶ ಆಚಾರ್ಯ, ಪ್ರಮುಖರಾದ ಮಧುಕರ ಬಂಗೇರ, ವಸಂತ ಗೌಡ ಮುದ್ದಾಜೆ, ವಿಶ್ವನಾಥ ಗೌಡ, ರಾಮಣ್ಣ ಗೌಡ ಮೀಯಾಲು, ಪುಷ್ಪಲತಾ ಎಸ್., ಹೇಮಾ ಎಚ್.ರಾವ್, ಸುಧೀಂದ್ರ ಭಂಡಾರಿ ಮತ್ತಿತರರು ಇದ್ದರು.

ಮುಖ್ಯಶಿಕ್ಷಕ ಜಯರಾಮ ಪಡ್ರೆ ಸ್ವಾಗತಿಸಿ, ಶಿಕ್ಷಕ ಶ್ರೀಪತಿ ಭಟ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು