News Karnataka Kannada
Monday, May 13 2024
ಅಂಕಣ

ನಾರಿಯರ ಗಮನ ಸಳೆಯುತ್ತಿದೆ ಕಾಟನ್ ಸೀರೆಗಳು

Cotton sarees catch the attention of the naris
Photo Credit : Wikimedia

ಸೀರೆ ಎಲ್ಲಾ ಮಹಿಳೆಯರು ಇಷ್ಟ ಪಡುವಂತಹ ಧಿರಿಸು ಎಂದರೆ ತಪ್ಪಾಗದು. ಜೊತೆಗೆ ಸೀರೆ ಭಾರತದ ಸಾಂಪ್ರದಾಯಿಕ ಉಡುಗೆ ಕೂಡ ಹೌದು. ಸೀರೆಯನ್ನು ಕೇವಲ ನಮ್ಮ ದೇಶದವರು ಮಾತ್ರ ಇಷ್ಟ ಪಡುವುದಲ್ಲದೆ ಹೊರ ದೇಶದ ಮಹಿಳೆಯರು ಕೂಡ ಇತ್ತ ಆಕರ್ಷಿತರಾಗಿದ್ದಾರೆ ಮತ್ತು ಆಕರ್ಷಿತರಾಗುತ್ತಿದ್ದಾರೆ. ಇಂದಿನ ಆಧುನಿಕ ಜಗತ್ತಿನ ಮಹಿಳೆಯರು ಕೂಡ ಕಚೇರಿಗೆ ಹೋಗುವಾಗ ಸೀರೆಯುಡುದನ್ನು ನಾವು ನೋಡಿದ್ದೇವೆ.

ಸಾಮಾನ್ಯವಾಗಿ ಮಹಿಳೆಯರು ಸಾರಿಯಂತಹ ಸಾಂಪ್ರದಾಯಿಕ ಉಡುಗೆಯನ್ನು ಹಬ್ಬಗಳಂತಹ ವಿಶೇಷ ಸಂದರ್ಭ ಉಡುತ್ತಾರೆ. ಆದರೆ ಸಿಂಪಲ್ ಕಾಟನ್ ಸೀರೆಗಳು ಕಚೇರಿಗೆ ಹೋಗುವಾಗಲೂ ಉಡಬಹುದು. ಏಕೆಂದರೆ ಇತರ ಸೀರೆಗೆ ಹೋಲಿಸಿದರೆ ಕಾಟನ್ ಸೀರೆ ಕಂಫರ್ಟ್ ಫೀಲ್ ಕೊಡುತ್ತದೆ ಆದ್ದರಿಂದ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಈ ಕಾಟನ್ ಸೀರೆಗಳು ಸೂಕ್ತ.

ಪ್ರಿಂಟೆಡ್ ಕಾಟನ್ ಸೀರೆಯೂ ಕಚೇರಿಗೆ ಹೋಗುವಾಗ ಧರಿಸಬಹುದು. ದೇಹದ ರಚನೆಗೆ ಅನುಗುಣವಾಗಿ ಪ್ರಿಂಟ್ ಗಳನ್ನು ಆಯ್ಕೆ ಮಾಡಬೇಕು. ದಪ್ಪ ಇದ್ದವರು ಸಣ್ಣ ಪ್ರಿಂಟ್‌ ಇರುವ ಸೀರೆಯನ್ನು ಆಯ್ಕೆ ಮಾಡಬೇಕು, ಸಪೂರ ದೇಹವನ್ನು ಹೊಂದಿರುವವರು ದೊಡ್ಡ ಪ್ರಿಂಟ್ ಇರುವ ಸೀರೆ ಆಯ್ಕೆ ಮಾಡಬೇಕು.

ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರು ಬಿಳಿ ಕಾಟನ್ ಸೀರೆಯನ್ನು ಇಷ್ಟ ಪಡುತ್ತಾರೆ. ಅಂತವರು ಬಿಳಿ ಕಾಟನ್ ಸೀರೆಗೆ ಗಾಢ ಬಣ್ಣದ ರವಿಕೆಯನ್ನು ಧರಿಸಿ, ಕೆಂಪು ಬಣ್ಣದ ರವಿಕೆ, ಪಿಂಕ್ ಬಣ್ಣದ ರವಿಕೆ, ರಾಯಲ್ ಬ್ಲೂ ಬಣ್ಣದ ರವಿಕೆ ಮತ್ತು ಕಪ್ಪು ಬಣ್ಣದ ರವಿಕೆಯನ್ನು ಮಾಚ್ ಮಾಡಿದರೆ ಒಳ್ಳೆ ಲುಕ್ ಜೊತೆಗೆ ಸಾಂಪ್ರದಾಯಿಕ ಉಡುಗೆಯ ಅಂದವನ್ನು ಹೆಚ್ಚಿಸಲೂ ಸಹಕರಿಸುತ್ತದೆ. ಒಂದು ವೇಳೆ ನೀವು ಗಾಢ ಬಣ್ಣದ ಸೀರೆಯನ್ನು ಧರಿಸಿದರೆ ಆಗ ಅದಕ್ಕೆ ಪ್ರಿಂಟೆಂಡ್ ರವಿಕೆಗಳನ್ನು ಮಾಚ್ ಮಾಡಿ ಆಗ ನಿಮ್ಮ ಸೌಂದರ್ಯವು ದ್ವಿಗುಣಗೊಳ್ಳುತ್ತದೆ.

ಕಪ್ಪು ಬಣ್ಣದ ಕಾಟನ್ ರೇಷ್ಮೆ ಸೀರೆ ಉಡುವುದರಿಂದ ಮಹಿಳೆಯರು ನೋಡಲು ಗ್ಲಾಮರಸ್ ಆಗಿ ಕಾಣುತ್ತಾರೆ. ಏಕೆಂದರೆ ಇದರಲ್ಲಿ ಮೆಟಾಲಿಕ್ ಜರಿ ಬಾರ್ಡರ್ ಬರುವ ಜೊತೆಗೆ ದೇವಾಲಯದ ಚಿತ್ರದ ಹೆಣಿಗೆ ಮಾಡಲಾಗಿರುತ್ತದೆ. ಆದ್ದರಿಂದಲೇ ಈ ತರಹದ ಸೀರೆಯನ್ನೇ ಮಹಿಳೆಯರು ಹೆಚ್ಚು ಇಷ್ಟ ಪಡುವುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು