ಮಂಗಳೂರು: ದಾರಿ ಮಧ್ಯೆ ಕತ್ತಿ ಬೀಸಿ ಹುಚ್ಚಾಟ ನಡೆಸಿದ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ನಡೆದಿದೆ.
ಅತುಲ್ ಕುಲ್ಲು ಬಂಧಿತ ವ್ಯಕ್ತಿ. ಗೋವಾದಿಂದ ಕಾಸರಗೋಡಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತ ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದಿದ್ದಾನೆ. ನಂತರ ಸಾರ್ವಜನಿಕರ ಜತೆ ಒರಟಾಗಿ ವರ್ತಿಸಿದ್ದು ವೆಂಕಪ್ಪ ಎಂಬ ಸ್ಥಳೀಯ ವ್ಯಕ್ತಿಗೆ ಬೆದರಿಸಿ ಆತನ ಬಳಿ ಇರುವ ಕತ್ತಿಯನ್ನು ತೆಗೆದುಕೊಂಡು ಅದನ್ನು ಬೀಸುತ್ತಾ ಜನರಲ್ಲಿ ಆತಂಕ ಸೃಷ್ಟಿಸಿದ್ದಾನೆ.
ಅಷ್ಟೇ ಅಲ್ಲದೆ ಗ್ಯಾರೇಜ್ ಮಾಲೀಕ ಇಮ್ರಾನ್ ಎಂಬ ವ್ಯಕ್ತಿಗೆ ಕತ್ತಿ ತಾಗಿ ಸಣ್ಣಪುಟ್ಟ ಗಾಯಗಳಾಗಿವೆ. ಸಾರ್ವಜನಿಕರು ಆತನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ವ್ಯಕ್ತಿ ಮಾನಸಿಕ ಅಸ್ವಸ್ಥ ರೀತಿ ವರ್ತಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.