News Karnataka Kannada
Tuesday, May 07 2024
ಮಂಗಳೂರು

ಮಂಗಳೂರು: ಡಿ.೧೯ ರಿಂದ ೨೨ ರವರೆಗೆ ನಾಲ್ಕು ದಿನಗಳ ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ

Mangaluru: A four-day Land Trades Property Show from December 19 to 22
Photo Credit : News Kannada

ಮಂಗಳೂರು ಡಿ.17:“ಸ್ಮಾರ್ಟ್ ಸಿಟಿ’ ಎಂಬ ಪ್ರತಿಷ್ಠೆಯ ಬಿರುದಾಂಕಿತ ಮಂಗಳೂರು ಈಗ ಜಾಗತಿಕ ಮನ್ನಣೆ ಮತ್ತು ವಿಶ್ವಮಟ್ಟದ ಜೀವನ ಶೈಲಿಯನ್ನು ಅಂತರ್ಗತ ಮಾಡಿಕೊಂಡಿದೆ. ಈ ಹೊಸತನದ ಬದಲಾವಣೆಗೆ ಸ್ಪಂದಿಸುತ್ತಾ, ಮಂಗಳೂರಿನ ಪ್ರಮುಖ ಪ್ರಾಪರ್ಟಿ ಡೆವೆಲಪರ್ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯು, ಹೊಸ ತಲೆಮಾರಿನ ಆಶಯಕ್ಕೆ ಅನುಗುಣವಾದ ನೂತನ ಪರಿಕಲ್ಪನೆಯ ಜೀವನ ಶೈಲಿಯ ಅಪಾರ್ಟ್ಮೆಂಟ್‌ಗಳ ಸರಣಿಯನ್ನು ಅನುಷ್ಠಾನಗೊಳಿಸಿದೆ. ಈ ಎಲ್ಲಾ ವಿನೂತನ ಯೋಜನೆಗಳ ವಿವರಗಳನ್ನು ಗ್ರಾಹಕರಿಗೆ ಒಂದೇ ಸೂರಿನಡಿ ಒದಗಿಸಲು ಡಿಸೆಂಬರ್ 19 ರಿಂದ 22 ರವರೆಗೆ (ನಾಲ್ಕು ದಿನ) ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ ಏರ್ಪಡಿಸಲಾಗಿದೆ. ಮಂಗಳೂರಿನ ಬಲ್ಮಠದ ಕಲೆಕ್ಟರ್ ಗೇಟ್ ಬಳಿಯ ಲ್ಯಾಂಡ್ ಟ್ರೇಡ್ಸ್ನ ವಾಣಿಜ್ಯ ಹೆಗ್ಗುರುತು – ಮೈಲ್‌ಸ್ಟೋನ್-25 ವಾಣಿಜ್ಯ ಸಂಕೀರ್ಣದಲ್ಲಿ ಜರಗುವ ಈ ಮೇಳವು ಲ್ಯಾಂಡ್‌ಟ್ರೇಡ್ಸ್ ಬಿಲ್ಡರ್ ಆ್ಯಂಡ್ ಡೆವೆಲರ್ ಯಶಸ್ವೀ 30 ವರ್ಷಗಳ ಆಚರಣೆಯು ಆಗಲಿದೆ.

ಅಪಾರ್ಟ್ಮೆಂಟ್ಸ್ ಖರೀದಿಸ ಬಯಸುವ ಗ್ರಾಹಕರು ಬೆಳಿಗ್ಗೆ 10 ರಿಂದ ಸಂಜೆ 7 ರ ತನಕ ಯಾವುದೇ ಸಮಯದಲ್ಲಿ ಈ ಮೇಳಕ್ಕೆ ಭೇಟಿ ನೀಡಬಹುದು ಮತ್ತು ನೂತನ ಯೋಜನೆಗಳಲ್ಲಿನ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪಡೆಯಬಹುದು. ವೈಯಕ್ತಿಕ ಅಪಾರ್ಟ್ಮೆಂಟ್ ಖರೀದಿಗೆ ಸ್ಥಳದಲ್ಲೇ ಕೊಡುಗೆ. ಪ್ರತೀ ಬುಕಿಂಗ್‌ನಲ್ಲಿ ಚಿನ್ನದ ನಾಣ್ಯ, ಶೂನ್ಯ ಜೆ.ಎಸ್.ಟಿ.ಗಳನ್ನು ಆಯ್ದ ಯೋಜನೆಗಳಲ್ಲಿ ಮತ್ತು ಗೃಹ ಸಾಲದಲ್ಲಿ ಶೂನ್ಯ ನಿರ್ವಹಣಾ ಶುಲ್ಕದ ಸೌಲಭ್ಯಗಳನ್ನು ಗ್ರಾಹಕರು ಪಡೆಯಬಹುದು. ಲ್ಯಾಂಡ್ ಟ್ರೇಡ್ಸ್ ಮೇಳದಲ್ಲಿರುವ ಹೋಂ ಲೋನ್ ಕೌಂಟರ್‌ಗಳ ಮೂಲಕ ಅರ್ಹ ಖರೀದಿದಾರರಿಗೆ ಮುಂಗಡ ಮತ್ತು ಸ್ಥಳದಲ್ಲೇ ಮಂಜೂರಾತಿಯ ಅವಕಾಶವಿದೆ. ಐದು ಪ್ರಮುಖ ಬ್ಯಾಂಕ್‌ಗಳಾದ ಕರ್ನಾಟಕ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಐ.ಸಿ.ಐ.ಸಿ.ಐ ಬ್ಯಾಂಕ್ ಈ ಮೇಳದಲ್ಲಿ ಭಾಗವಹಿಸಲಿವೆ. “ಬಲಿಷ್ಠ ಮತ್ತು ಪುನಶ್ಚೇತನಗೊಂಡ ಆರ್ಥಿಕತೆ, ಆದಾಯ ಮಟ್ಟದ ಹೆಚ್ಚಳ, ಗೃಹಸಾಲಕ್ಕೆ ಕಡಿಮೆ ಬಡ್ಡಿ ದರಗಳು ಮುಂದಿನ ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ವರದಾಯಕವಾಗಲಿದೆ. ವಿಶೇಷವಾಗಿ ಯುವಜನತೆಯ ಆಶೋಕ್ತರಗಳ ಆಧುನಿಕ ಲಕ್ಸುರಿ ಸೌಲಭ್ಯಗಳ ಪರಿಕಲ್ಪನೆಯ, ಅಪಾರ್ಟ್ಮೆಂಟ್ ಯೋಜನೆಗಳ ಸಮಗ್ರ ಮಾಹಿತಿಗಳನ್ನು ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ ಹೊಂದಿರುತ್ತದೆ. ಅತೀ ಸವಾಲುಗಳಿಂದ ಕೂಡಿರುವ ಈ ವ್ಯವಹಾರೋದ್ಯಮ ಕ್ಷೇತ್ರದಲ್ಲಿ 30 ಸಾರ್ಥಕ ವರ್ಷಗಳನ್ನು ನಮ್ಮ ಸಂಸ್ಥೆಯು ಹೊಂದಿರುವುದಕ್ಕೆ, ಅಪಾರ ಬೆಂಬಲ ನೀಡುತ್ತಿರುವ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಲು ಕೂಡಾ ಈ ಮೇಳದ ಆಯೋಜನೆ ಆಗಿದೆ” ಎಂದು ಲ್ಯಾಂಡ್ ಟ್ರೇಡ್ಸ್ ನ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಅವರಿಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಪ್ರಸಕ್ತ ಯೋಜನೆಗಳು
ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯು ಪ್ರಸ್ತುತ 5 ಮಹತ್ವದ ಯೋಜನೆಗಳನ್ನು ನಿರ್ವಹಿಸುತ್ತಿದೆ. ಕದ್ರಿ-ಶಿವಭಾಗ್ ನಡುವಣ ನಿಸರ್ಗ ರಮಣೀಯ ಎತ್ತರ ಪ್ರದೇಶದಲ್ಲಿ ಲ್ಯಾಂಡ್ ಟ್ರೇಡ್ಸ್ ಶಿವಭಾಗ್ ಎಂಬ 34 ಅಂತಸ್ತುಗಳ ಅರಮನೆ ಸದೃಶ ರೆಸಿಡೆನ್ಸಿಯಲ್ ಯೋಜನೆಯ ಕಾರ್ಯಾರಂಭವಾಗಿದೆ. ಸುಂದರ ಪರಿಸರ, ಅತ್ಯಾಧುನಿಕ ಸೌಕರ್ಯ, ಇಲ್ಲಿನ 2.32 ಎಕರೆ ಪ್ರಮುಖ ಪ್ರದೇಶದ ಶೇ.40 ರಷ್ಟು ಮಾತ್ರ ಕಟ್ಟಡದ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ. ಶೇ.60 ರಷ್ಟು ಜಮೀನನ್ನು ಮುಕ್ತವಲಯ ಉದ್ಯಾನ, ದಟ್ಟ ಹಸಿರು ಮತ್ತು ಜೀವನ ಶೈಲಿ ಸೌಲಭ್ಯಗಳಾದ ಜಾಗಿಂಗ್ ಟ್ರ್ಯಾಕ್, ಕಾರಂಜಿ, ಆ್ಯಂಫಿ ಥಿಯೇಟರ್‌ಗೆ ಬಳಕೆಯಾಗಲಿದೆ.

ಬೆಂದೂರ್‌ವೆಲ್‌ನಲ್ಲಿ ನಿರ್ಮಾಣವಾಗುತ್ತಿರುವ 32 ಅಂತಸ್ತುಗಳ ಗಗನಚುಂಬಿ ‘ಅಲ್ಟೂರ’ ವಿಶ್ವದರ್ಜೆಯ ಸೌಲಭ್ಯ ಒದಗಿಸುತ್ತಿದೆ. ಮಣ್ಣಗುಡ್ಡ ಗಾಂಧಿನಗರದ ‘ನಕ್ಷತ್ರ’ ಯೋಜನೆಯು 49 ಸುಸಜ್ಜಿತ 2 ಹಾಗೂ 3 ಬಿ.ಹೆಚ್.ಕೆ ಪ್ರೀಮಿಯಂ ಅಪಾರ್ಟ್ಮೆಂಟ್, ಉರ್ವ-ಮಾರಿಗುಡಿ ರಸ್ತೆಯ‘ಅದಿರ’ 3 ಬಿ.ಹೆಚ್.ಕೆ. ಗಳ 16 ಅಪಾರ್ಟ್ಮೆಂಟ್‌ಗಳ ಯೋಜನೆ. ಉಳ್ಳಾಲದ ರಮಣೀಯ ಹೊರವಲಯದಲ್ಲಿ 1.5 ಎಕರೆ ಜಮೀನಿನಲ್ಲಿ ‘ಕಾಮತ್ ಗಾರ್ಡನ್’ ಎಂಬ 16 ಸ್ವತಂತ್ರ ಮನೆ ನಿವೇಶನಗಳ ಸುಸಜ್ಜಿತ ಬಡಾವಣೆ ಅಭಿವೃದ್ಧಿಪಡಿಸಲಾಗಿದೆ.

ಪ್ರವೇಶಕ್ಕೆ ಸಿದ್ಧವಾಗಿರುವ ಮೂರು ಯೋಜನೆಗಳ ಬಗ್ಗೆ ಮೇಳದಲ್ಲಿ ವಿವರ ನೀಡಲಾಗುವುದು. ಹ್ಯಾಟ್‌ಹಿಲ್‌ನಲ್ಲಿರುವ ಸಾಲೀಟೇರ್-32 ಅಂತಸ್ತುಗಳ 143ಸೂಪರ್ ಲಕ್ಸುರಿ ಅಪಾರ್ಟ್ಮೆಂಟ್ ಲ್ಯಾಂಡ್ ಟ್ರೇಡ್ಸ್ನ ಅತ್ಯಂತ ಪ್ರತಿಷ್ಠೆಯ ಗಗನ ಚುಂಬಿ ಯೋಜನೆಯಾಗಿದೆ. ದೇರೆಬೈಲ್‌ನ ಹ್ಯಾಬಿಟ್ಯಾಟ್ ವನ್-54 ಯೋಜನೆಯು ಒಂದು ಮತ್ತು ಎರಡು ಬೆಡ್‌ರೂಮ್‌ಗಳ 154 ಬಜೆಟ್ ಅಪಾರ್ಟ್ಮೆಂಟ್ ಸಂಕೀರ್ಣವಾಗಿದೆ. ಎಮರಾಲ್ಡ್ ಬೇ- ಸುರತ್ಕಲ್‌ನಲ್ಲಿರುವ ಕ್ಲಬ್‌ಹೌಸ್, ನಿಸರ್ಗ ಸೌಂದರ್ಯದ ಬೀಚ್ ಪ್ರಾಪರ್ಟಿಯಾಗಿದೆ.

ಮುಂಬರುವ ಯೋಜನೆಗಳು : ಲ್ಯಾಂಡ್ ಟ್ರೇಡ್ಸ್ ಈಗ ಮೂರು ನೂತನ ಗಗನ ಚುಂಬಿ ರೆಸಿಡೆನ್ಸಿಯಲ್ ಯೋಜನೆಗಳನ್ನು ಪ್ರಮುಖ ಪ್ರದೇಶಗಳಾದ ಲೇಡಿಹಿಲ್-ಚಿಲಿಂಬಿ ಮತ್ತು ಅಳಕೆಗಳಲ್ಲಿ ನಿರ್ಮಿಸಲಾಗಿದೆ. ವಿಸ್ತಾರವಾದ, ಜೀವನ ಶೈಲಿಗನುಗುಣವಾದ ಈ ಅಪಾರ್ಟ್ಮೆಂಟ್‌ಗಳು ಆಧುನಿಕ ಸೌಲಭ್ಯಗಳ ಸಹಿತವಾಗಿರುತ್ತವೆ. ಈಗ ಯೋಜನಾ ಹಂತದಲ್ಲಿದ್ದು, ಅಗತ್ಯ ಅನುಮತಿಗಳ ಬಳಿಕ ಅನುಷ್ಠಾನಗಳ್ಳಲಿವೆ.

ವಿನೂತನ ಯೋಜನೆ
ಸ್ಮಾರ್ಟ್ಸಿಟಿ ಸ್ಥಾನಮಾನದ ಜತೆಜತೆಯಲ್ಲಿ ವಿಶ್ವದರ್ಜೆಗೆ ಸಮನಾದ ಜೀವನ ಶೈಲಿಗೆ ಮಂಗಳೂರಿನ ಜನತೆ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅಪಾರ್ಟ್ಮೆಂಟ್ ಸಂಕೀರ್ಣದ ಸುರಕ್ಷಾ ವಲಯದೊಳಗೆ 5-ಸ್ಟಾರ್ ಪರಿಸರ ನಿರ್ಮಾಣದ, ನೂತನ ಜೀವನ ಶೈಲಿಯ ಅಪಾರ್ಟ್ಮೆಂಟ್‌ಗಳ ಯೋಜನೆಗೆ ಲ್ಯಾಂಡ್ ಟ್ರೇಡ್ಸ್ ಮುಂದಾಗಿದೆ. ತನ್ಮೂಲಕ ಸಾಲಿಟೇರ್, ಅಲ್ಟೂರ, ಈಗ ಶಿವಭಾಗ್‌ನಂತಹ ಅತ್ಯಾಧುನಿಕ ಗಗನಚುಂಬಿ ಸೌಧಗಳ ನಿರ್ಮಾಣಕ್ಕೆ ಲ್ಯಾಂಡ್ ಟ್ರೇಡ್ಸ್ ಸ್ಫೂರ್ತಿ ಪಡೆಯಿತು. ರೆಸಾರ್ಟ್ ಸ್ವರೂಪದಂತ ಕ್ಲಬ್‌ಹೌಸ್, ಒಳಾಂಗಣ-ಹೊರಾಂಗಣ ಮನರಂಜನಾ ಮತ್ತು ಆರೋಗ್ಯವರ್ಧಕ ಸೌಲಭ್ಯಕ್ಕೆ ಮುಂದಾಯಿತು. ಈಜುಕೊಳ ಸುಸಜ್ಜಿತ ಜಿಮ್, ಸಾನಾ ಮತ್ತು ಜಕೂಝಿ, ಯೋಗ ಮತ್ತು ಧ್ಯಾನ ಕೊಠಡಿ, ಕ್ರೀಡಾ ಸೌಲಭ್ಯ, ಮಕ್ಕಳ ಆಟದ ಅಂಗಣ ಇತ್ಯಾದಿ ಒದಗಿಸುತ್ತಾ ಬಂದಿದೆ.

“ಸಮಾನ ಬಳಕೆಯ ಸೌಲಭ್ಯಗಳು ಸುಸಜ್ಜಿತ ಪ್ರವೇಶ ವಲಯ, ಹೈಸ್ಪೀಡ್ ಲಿಫ್ಟ್ಗಳು, ಸಂಗ್ರಹ ಟ್ಯಾಂಕ್‌ಗಳಿಂದ ನಿರಂತರ ನೀರು ಪೂರೈಕೆ, ಹೆವಿಡ್ಯೂಟಿ ಜನರೇಟರ್‌ಗಳು, ಸ್ವಯಂ ಚಾಲಿತ ಸ್ವಿಚ್-ಓವರ್‌ಗಳನ್ನು ಹೊಂದಿರುತ್ತದೆ. ಇಲೆಕ್ಟ್ರಿಕಲ್ ಚಾರ್ಜಿಂಗ್ ಪಾಯಿಂಟ್‌ಗಳ ಸಹಿತ ವಿಸ್ತಾರವಾದ ಕೆಳ ಅಂತಸ್ತು ಪಾರ್ಕಿಂಗ್ ಸೌಲಭ್ಯ ಇರುತ್ತದೆ. ಆಧುನಿಕ ತಂತ್ರಜ್ಞಾನ ಸೌಲಭ್ಯ ಸಹಿತ ಗೇಟೆಡ್ ಸೆಕ್ಯೂರಿಟಿ, ಸಾಮಾನ್ಯ ಪ್ರದೇಶದ ಸಿಸಿಟಿವಿ ದಾಖಲೆ, ಪ್ರತಿ ಅಪಾರ್ಟ್ಮೆಂಟಿಗೆ ವಿಡಿಯೋ ಡೋರ್ ಫೋನ್, ಅತ್ಯಾಧುನಿಕ ಅಗ್ನಿಶಮನ ಯಂತ್ರ ಮತ್ತು ವಿನ್ಯಾಸ ಉಪಕ್ರಮಗಳು ಇಲ್ಲಿ ಅತ್ಯಂತ ಸುರಕ್ಷೆ ಮತ್ತು ಭದ್ರತೆಯನ್ನು ನಿವಾಸಿಗಳಿಗೆ ಒದಗಿಸುತ್ತದೆ. ಈ ಮೂಲಕ ವಿದೇಶಗಳ ಮತ್ತು ಮೆಟ್ರೋನಗರಗಳಂತಹ ಉನ್ನತ ಪರಿಕಲ್ಪನೆಯ ಜೀವನಶೈಲಿಯನ್ನು ಲ್ಯಾಂಡ್ ಟ್ರೇಡ್ಸ್ ಗ್ರಾಹಕರು ಹೊಂದಬಹುದಾಗಿದೆ” ಎಂದು ಶ್ರೀನಾಥ್ ಹೆಬ್ಬಾರ್ ವಿವರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು