ಮಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸವಿನೆನಪಿನಲ್ಲಿ ಮಂಗಳೂರಿನ ಕೆನರಾ ಗರ್ಲ್ಸ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿನಿ ಅಮೃತಾ ಜೋಷಿ ಇದೇ ಅಗಸ್ಟ್ 10 ರಂದು ಬೆಳಿಗ್ಗೆ 10.30 ಗಂಟೆಗೆ ಡೊಂಗರಕೇರಿ ಕೆನರಾ ಹೈಸ್ಕೂಲಿಗೆ ಭೇಟಿ ನೀಡಲಿದ್ದು, ಕೆನರಾ ಅಸೋಸಿಯೇಶನ್ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಗುವುದು.
ಅಮೃತಾ ಜೋಷಿಯವರು ತಿರಂಗಾ ಯಾತ್ರಾ ಅಭಿಯಾನದ ಅಂಗವಾಗಿ ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶವ್ಯಾಪಿ 22000 ಕಿ.ಮೀ ಸಂಚರಿಸಿದ್ದಾರೆ.
ಬರ್ಮಾ, ಬಾಂಗ್ಲಾ, ನೇಪಾಳದ ಗಡಿಯಲ್ಲಿಯೂ ಸಂಚರಿಸಿ ಅಲ್ಲಿ ನಮ್ಮ ಭಾರತೀಯ ಸೈನಿಕರ ಸವಾಲಿನ ಪರಿಸ್ಥಿತಿಯನ್ನು ಕೂಡ ಕಣ್ಣಾರೆ ಕಂಡು ಬಂದಿದ್ದಾರೆ.