ಮಂಗಳೂರು: ವಿಶ್ವಾದ್ಯಂತ ನೆಲೆಸಿರುವ ಜಿಎಸ್ ಬಿ ಸಮುದಾಯದ ಅತೀ ದೊಡ್ಡ ಸಂಭ್ರಮ ಜಿಪಿಎಲ್ ಉತ್ಸವದ 2023 ಆಮಂತ್ರಣ ಪತ್ರಿಕೆಯನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಆಯೋಜಕರು ನೀಡಿ ಮೂರು ದಿನಗಳ ಉತ್ಸವಕ್ಕೆ ಆಮಂತ್ರಿಸಿದರು.
ಈ ಬಾರಿಯ ವಿಶೇಷತೆಗಳ ಬಗ್ಗೆ ಮಾಹಿತಿ ಪಡೆದ ಸಿಎಂ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಹಾಗೂ ಗಣ್ಯರು ಉಪಸ್ಥಿತರಿದ್ದರು.