News Karnataka Kannada
Thursday, May 02 2024
ಮಂಗಳೂರು

ಬೆಳ್ತಂಗಡಿ: ಒಮ್ನಿ ಕಾರಿನಲ್ಲಿ ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ಐವರ ಬಂಧನ

8 youths arrested in connection with clash at Harobenavalli
Photo Credit : By Author

ಬೆಳ್ತಂಗಡಿ; ಅಳದಂಗಡಿ ಸಮೀಪ ಒಮ್ನಿ ಕಾರಿನಲ್ಲಿ ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ಪ್ರಕರಣವೊಂದನ್ನು ಬುಧವಾರ ಬೆಳಗ್ಗಿನ ಜಾವ ವೇಣೂರು ಪೊಲೀಸರು ಪತ್ತೆ ಹಚ್ಚಿದ್ದು ಐವರು ಆರೋಪಿಗಳನ್ನು ಬಂಧಿಸಿ ಐದು ಜಾನುವಾರುಗಳನ್ನು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಕರಾಯ ನಿವಾಸಿ ತೌಸೀಫ್( 32), ಪುತ್ತಿಲ ನಿವಾಸಿ ಉಸ್ಮಾನ್(55), ಉಪ್ಪಿನಂಗಡಿ ವಳಾಲು ನಿವಾಸಿ ಇಕ್ಬಾಲ್ (34), ಕರಾಯ ನಿವಾಸಿ ಇರ್ಫಾನ್(25), ಕರಾಯ ನಿವಾಸಿ ಅನಸ್(23) ಎಂಬವರಾಗಿದ್ದಾರೆ.

ವೇಣೂರು ಎಸ್.ಐ ಸೌಮ್ಯ ಹಾಗೂ ತಂಡ ರಾತ್ರಿಯ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಬಂದವರನ್ನು ವಿಚಾರಿಸಲಾಗಿ ಅವರೊ ಹಾಗೂ ಇತರರು ಸೇರಿ ಅಕ್ರಮ ಗೋ ಸಾಗಾಟ ನಡೆಸುತ್ತಿರುವ ವಿಚಾರ ತಿಳಿದಿದ್ದು ಈ ಹಿನ್ನಲೆಯಲ್ಲಿ ಓಮ್ನಿ ಕಾರನ್ನು ತಡೆದು ಪರಿಶೀಲಿಸಿದಾಗ ಕಾರಿನಲ್ಲಿ ಐದು ಜಾನುವಾರುಗಳನ್ನು ಅತ್ಯಂತ ಹಿಂಸಾತ್ಮಕವಾಗಿ ತುಂಬಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಕೂಡಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಓಮ್ನಿಯಲ್ಲಿ ಕೈ ಕಾಲುಗಳನ್ನು ಕಟ್ಟಿ ಅತ್ಯಂತ ಹಿಂಸಾತ್ಮಕಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ವಶಪಡಿಸಿಕೊಂಡಿರುವ ಒಟ್ಟು ಸೊತ್ತುಗಳ ಮೌಲ್ಯ 1,90,000 ಎಂದು ಅಂದಾಜಿಸಲಾಗಿದ್ದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು