News Karnataka Kannada
Sunday, May 05 2024
ಮಂಗಳೂರು

ಬೆಳ್ಳಾರೆ ಪ್ರವೀಣ್ ಕುಮಾರ್ ಹತ್ಯೆ, ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ : ಯು.ಟಿ.ಖಾದರ್

Bellare Praveen Kumar murder case: Culprits to be arrested soon : U.T. Khader
Photo Credit : Twitter

ಬೆಳ್ಳಾರೆ : ಇತ್ತೀಚೆಗೆ ಸಮಾಜ ಘಾತುಕ ಶಕ್ತಿಗಳು,ಕೊಲೆಗಡುಕರಿಗೆ ಸರಕಾರದ ಭಯವಿಲ್ಲ ಎಂಬುದು ಕೆಲವು ದಿನಗಳಲ್ಲಿ ಆದಂತಹ ಘಟನೆಗಳೇ ಸಾಕ್ಷಿ. ಈ ಸರಕಾರದಲ್ಲಿ ಜನಸಾಮಾನ್ಯರಿಗೂ ರಕ್ಷಣೆ ನೆಮ್ಮದಿಯ ವಾತಾವರಣ ಇಲ್ಲ. ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳ ಅವಧಿಯಲ್ಲಿ ಮಸೂದ್ ಮತ್ತು ಪ್ರವೀಣ್ ಹತ್ಯೆಯಾಗಿದ್ದು ಅತ್ಯಂತ ನೋವಿನ ವಿಚಾರ. ಗೂಂಡಾಗಳಿಗೆ, ಕೊಲೆಗಡುಕರಿಗೆ ಸರಕಾರ ಮತ್ತು ಕಾನೂನಿನ ಭಯವಿಲ್ಲ ಎಂದು ಇದರಿಂದ ಸಾಬೀತಾಗಿದೆ.ಈ ಹಿಂದೆ ಆದ ಘಟನೆಯನ್ನು ಸೂಕ್ಷಮತೆಯನ್ನು ಅರಿತುಕೊಂಡು ಮುಂಜಾಗ್ರತೆ ಮಾಡುವ ಜವಾಬ್ದಾರಿ ಸರಕಾರ ಮತ್ತು ಪೊಲೀಸ್ ಇಲಾಖೆಯದ್ದು.

ನಿನ್ನೆ ನಡೆದ ಪ್ರವೀಣ್ ಹತ್ಯೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಶಾಸಕ ಯು.ಟಿ.ಖಾದರ್,ಈ ಎಲ್ಲಾ ಘಟನೆಗಳನ್ನು ಭೇದಿಸುವುದರ ಮೂಲಕ ನೈಜ ಅಪರಾಧಿಗಳನ್ನು ಆದಷ್ಟು ಬೇಗನೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿಯೂ ಸರಕಾರ ಮೃತ ಮಶೂದ್ ಮತ್ತು ಪ್ರವೀಣ್ ರವರ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ನೀಡಬೇಕೆಂದು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಶಾಸಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ಎಲ್ಲಾ ಜಾತಿ,ಮತ,ವರ್ಗದವರು ಒಂದಾಗಿ ಯಾರೇ ಸಮಾಜ ಘಾತುಕ ಶಕ್ತಿಗಳು,ಕೊಲೆಗಡುಕರು ಆಗಲಿ ಅವರ ವಿರುದ್ಧ ಹೋರಾಡಲು ಒಟ್ಟಾಗಿ ಮುಂದಾಗಬೇಕು ಮತ್ತು ಇಂತಹ ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಮಾಜದಲ್ಲಿ ಒಟ್ಟಾಗಿ ಒಂದಾಗಿ ಸಂಪೂರ್ಣ ಸಹಕಾರ ಕೊಡಬೇಕೆಂದು ಯು.ಟಿ.ಖಾದರ್ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು