News Karnataka Kannada
Friday, May 10 2024
ಮಂಗಳೂರು

ಮಂಗಳೂರು: ನಾಡದೋಣಿ ಮೀನುಗಾರಿಕೆ ಆರಂಭ

Country boat fishing begins
Photo Credit : By Author

ಮಂಗಳೂರು: ಕಳೆದ ಎರಡು ದಿನಗಳಿಂದ ದೊಡ್ಡಗಾತ್ರದ ಬಂಗುಡೆ ಮೀನುಗಳು ಮಾರುಕಟ್ಟೆಯಲ್ಲಿ ಕೆಜಿಗೆ 300ರಿಂದ 350 ರೂ. ಗೆ ದೊರೆಯುತ್ತಿದ್ದು ಇದು ಒಮನ್‌ ದೇಶದಿಂದ, ಆಮದಾದ ಮೀನು ಎಂದು ಹೇಳಲಾಗಿದೆ. ​​ಸೋಮವಾರ ಸುಮಾರು 100 ದೋಣಿಗಳು ಮೀನುಗಾರಿಕೆಗೆ ತೆರಳಿದ್ದು ಇವೆಲ್ಲ ಪಟ್ಟೆ ಬಲೆ ದೋಣಿಗಳು. ಬೆಳಗ್ಗೆ 9-10ರ ಬಳಿಕವೇ ಮೀನುಗಾರಿಕೆಗೆ ತೆರಳಲು ಸಾಧ್ಯವಾಗಿದೆ.

ಮೀನುಗಾರರು ಬಹುದಿನಗಳಿಂದ ಕಾತರಿಸುತ್ತಿದ್ದ ನವ ಮಂಗಳೂರು ಎನ್‌ಎಂಪಿಎ ಮೂಲಕ ನಡೆಯುವ ಮಳೆಗಾಲದ ನಾಡದೋಣಿ ಮೀನುಗಾರಿಕೆ ಸೋಮವಾರದಿಂದ ಆರಂಭಗೊಂಡಿದ್ದು ಸಣ್ಣ ಬಂಗುಡೆ, ಸ್ವಾಡಿ ಮೀನುಗಳು ಬಲೆಗೆ ಬಿದ್ದಿವೆ.

ಸೋಮವಾರ ಸುಮಾರು 100 ದೋಣಿಗಳು ಮೀನುಗಾರಿಕೆಗೆ ತೆರಳಿದ್ದು ಇವೆಲ್ಲ ಪಟ್ಟೆ ಬಲೆ ದೋಣಿಗಳು. ಬೆಳಗ್ಗೆ 9-10ರ ಬಳಿಕವೇ ಮೀನುಗಾರಿಕೆಗೆ ತೆರಳಲು ಸಾಧ್ಯವಾಗಿದ್ದು ಇದಕ್ಕೆ ಬಂದರು ಪ್ರವೇಶಿಸಲು ಅನುಮತಿ ಪಡೆಯುವಲ್ಲಿ ವಿಳಂಬ ಕಾರಣ ಎಂದು ಮೀನುಗಾರರು ಹೇಳಿದರು.

ಮೊದಲ ದಿನ ಮೀನು ಖರೀದಿಸಲು ಗ್ರಾಹಕರಿಲ್ಲದೆ ಮೀನುಗಾರರು ನಷ್ಟ ಅನುಭವಿಸಿದರು ಎನ್ನುತ್ತಾರೆ ನಾಡದೋಣಿ ಮೀನುಗಾರಾದ ಸುರೇಶ್‌ ಶ್ರೀಯಾನ್‌ ಬೈಕಂಪಾಡಿ ಮತ್ತು ಕಿಶೋರ್‌ ಗುಡ್ಡೆಕೊಪ್ಲ. ಸಣ್ಣ ಬಂಗುಡೆ ಒಂದಕ್ಕೆ ಸುಮಾರು 6 ರೂ.ನಿಂದ 6.5 ರೂ. ವರೆಗೆ, ಸ್ವಾಡಿ 2ರಿಂದ 4 ರೂ. ತನಕ ಮಾರಾಟವಾಗಿದೆ. ಮೀನು ಹಿಡಿದವರಿಗೆ ಏನೂ ಉಳಿಯದಂತಾಗಿತ್ತು ಎಂದು ಮೀನುಗಾರರು ಹೇಳಿದ್ದಾರೆ.

48 ದಿನದ ಮೀನುಗಾರಿಕೆ ನಷ್ಟ
ಜೂನ್‌ 1ರಿಂದ ಆರಂಭವಾಗಬೇಕಾಗಿದ್ದ ಮೀನುಗಾರಿಕೆ ಮಳೆ ವಿಳಂಬ, ಚಂಡಮಾರುತ ಕಾರಣಗಳಿಂದ ಈ ವರ್ಷ ಹೇಗೂ ಜು. 18ಕ್ಕೆ ಆರಂಭವಾಗಿದ್ದು ಸುಮಾರು 48 ದಿನದ ಮೀನುಗಾರಿಕೆ ಕೈತಪ್ಪಿ ಮೀನುಗಾರರಿಗೆ ನಷ್ಟವಾಗಿದೆ ಎಂದು ಕರಾವಳಿ ಮೂಲ ಮೀನುಗಾರ ಸಂಘದ ಪದಾಧಿಕಾರಿ ಚಂದ್ರಶೇಖರ್‌ ಶ್ರೀಯಾನ್‌ ಗುಡ್ಡೆಕೊಪ್ಲ ಹೇಳಿದರು.

ಸದ್ಯದಲ್ಲಿಯೇ ಗೋವಾ ಮೊದಲಾದಡೆ ಪರ್ಸೀನ್‌ ಮೀನುಗಾರಿಕೆ ಆರಂಭವಾಗುವುದರಿಂದ ಸ್ಥಳೀಯ ನಾಡದೋಣಿ ಮೀನುಗಾರಿಕೆ ಮೀನುಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಮೀನುಗಾರರು ಸಾಲದ ಭೀತಿ ಎದುರಿಸಬೇಕಾಗಿದೆ ಎಂದು ಮೀನುಗಾರರ ಆತಂಕವಾಗಿದೆ. ಕಳೆದ ಎರಡು ದಿನಗಳಿಂದ ದೊಡ್ಡಗಾತ್ರದ ಬಂಗುಡೆ ಮೀನುಗಳು ಮಾರುಕಟ್ಟೆಯಲ್ಲಿ ಕೆಜಿಗೆ 300ರಿಂದ 350 ರೂ. ಗೆ ದೊರೆಯುತ್ತಿದ್ದು ಇದು ಒಮನ್‌ ದೇಶದಿಂದ, ಆಮದಾದ ಮೀನು ಎಂದು ಹೇಳಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು