ಬೆಳ್ತಂಗಡಿ : ತೆಂಕಕಾರಂದೂರು ಗ್ರಾಮದ ಮಂಜೋಟ್ಟಿ ನಿವಾಸಿ , ವೃತ್ತಿಪರ ಪ್ರಸೂತಿ ತಜ್ಞೆ, ಸಮಾಜ ಸೇವಕಿ ಫಾತಿಮಾ ( ಪುತ್ತುಮ್ಮ) ಮಂಜೋಟ್ಟಿ ಗುರುವಾರ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ಕೊನೆಯುಸಿರೆಳೆದರು.
ಮೃತರು 4 ಗಂಡು ಮಕ್ಕಳು, 5 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಪರಿಸರದಲ್ಲಿ ‘ಪುತ್ತುಮ್ಮ ಬ್ಯಾರ್ದಿ’ ಎಂದೇ ಕರೆಯಲ್ಪಡುತ್ತಿದ್ದ ಶತಾಯುಷಿ ಅಜ್ಜಿ 1000ಕ್ಕೂ ಅಧಿಕ ಆರೋಗ್ಯಕರ ಹೆರಿಗೆಯನ್ನು ಮಾಡಿದ ಪ್ರಸೂತಿ ತಜ್ಞೆ, ಮಾತ್ರವಲ್ಲ ಸುಮಾರು ವರ್ಷಗಳ ಕಾಲ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಇವರಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿವೆ.