News Karnataka Kannada
Thursday, May 09 2024
ಮಂಗಳೂರು

ಭರತನೃತ್ಯ ಶಿಕ್ಷಣವನ್ನು ನೀಡಲು ಮುಂದಾದ ತಾಲೂಕಿನ ಮೊದಲ ನೃತ್ಯ ಗುರು ಪಿ.ಕಮಲಾಕ್ಷ ಆಚಾರ್

Bltngdy
Photo Credit :

ಬೆಳ್ತಂಗಡಿ : ಬೆಳ್ತಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ನಲವತ್ತಾರು ವರ್ಷಗಳ ಹಿಂದೆ ನೃತ್ಯ ನಿಕೇತನ ಎಂಬ ಕಲಾ ಸಂಸ್ಥೆಯನ್ನು ಪ್ರಾರಂಭಿಸಿ ಭರತನೃತ್ಯ ಶಿಕ್ಷಣವನ್ನು ನೀಡಲು ಮುಂದಾದ ತಾಲೂಕಿನ ಮೊದಲ ನೃತ್ಯ ಗುರು ಪಿ.ಕಮಲಾಕ್ಷ ಆಚಾರ್.

ಅವರು ಅನೇಕ ನೃತ್ಯ ಕಲಾವಿದೆಯರನ್ನು ರೂಪಿಸಿ ರಾಜ್ಯ, ಹೊರರಾಜ್ಯಗಳಲ್ಲೂ ನೃತ್ಯ ಪ್ರದರ್ಶಗಳನ್ನು ನೀಡುವ ಮೂಲಕ ನೃತ್ಯ ಕಲೆಯಲ್ಲಿ ಬೆಳ್ತಂಗಡಿಗೂ ಒಂದು ಸ್ಥಾನವನ್ನು ತಂದುಕೊಟ್ಟು ಇಲ್ಲಿಯ ಸಾಂಸ್ಕೃತಿಕ ಮೌಲ್ಯವನ್ನು ಹೆಚ್ಚಿಸಿದ್ದು ಸರಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ೨೦೨೧-೨೨ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ನೃತ್ಯಗುರು ಪಿ.ಕಮಲಾಕ್ಷ ಆಚಾರ್ ಅಭಿನಂದನಾ ಸಮಾರಂಭ ಮಾ.೨೭ರಂದು ಅಪರಾಹ್ನ ೨.೩೦ಕ್ಕೆ ಉಜಿರೆ ಶಾರದಾ ಮಂಟಪದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ವಿಠಲ ಶೆಟ್ಟಿ ಹೇಳಿದ್ದಾರೆ.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮೈಸೂರಿನ ನೃತ್ಯ ಕಲಾ ಪರಿಷತ್ತಿನ ನೃತ್ಯ ವಿದ್ಯಾನಿಧಿ ಬಿರುದು ಸಹಿತ ಅನೇಕ ಪ್ರಶಸ್ತಿ, ಗೌರವ, ಸನ್ಮಾನಗಳು ಬೇರೆ ಬೇರೆ ಸಂಘ ಸಂಸ್ಥೆಗಳಿಂದ ಲಭಿಸಿದೆ. ಇವರು ನೃತ್ಯರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಅವರಿಗೆ ಈ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಮೂಲಕ ಸಾಂಸ್ಕೃತಿಕ ರಂಗದಲ್ಲಿ ಬೆಳ್ತಂಗಡಿ ತಾಲೂಕಿಗೆ ಬಂದ ಗೌರವ ಇದಾಗಿದೆ. ವಿಶ್ರಾಂತ ಉಪನ್ಯಾಸಕ ಮಧುಕರ ಮಲ್ಯ ಅಭಿನಂದನಾ ಭಾಷಣ ಮಾಡಲಿದ್ದು ಡಾ| ಕೃಪಾ ಫಡ್ಕೆ, ಡಾ| ರಜತಾ ಪಿ.ಶೆಟ್ಟಿ ಉಜಿರೆ ಇವರು ಗುರುನಮನ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಪರಾಹ್ನ ೨.೩೦ರಿಂದ ಮೈಸೂರಿನ ನೃತ್ಯಗಿರಿ ತಂಡದವರಿಂದ ಭರತಾಂಜಲಿ ನೃತ್ಯ ಪ್ರದರ್ಶನ ನಡೆಯಲಿದೆ ಎಂದರು.

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಕೆ. ಪ್ರತಾಪ್‌ಸಿಂಹ ನಾಯಕ್, ಸಂಸ್ಕಾರ ಭಾರತೀಯ ಕರ್ನಾಟಕ ದಕ್ಷಿಣ ಉಪಾಧ್ಯಕ್ಷ ಚಂದ್ರೇಶೇಖರ ಶೆಟ್ಟಿ, ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಉಪಾಧ್ಯಕ್ಷರುಗಳಾದ ಗಣಪತಿ ಭಟ್ ಕುಳವರ್ಮ, ಡಾ| ರಜತ ಪಿ ಶೆಟ್ಟಿ, ಉಜಿರೆ, ಹೇಮಂತ ರಾವ್, ಕಾರ್ಯದರ್ಶಿ ಪುರುಷೋತ್ತಮ ಕೆ.ಎ, ಸದಸ್ಯ ರಂಜನ್ ರಾವ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು