News Karnataka Kannada
Sunday, May 19 2024
ಮಂಗಳೂರು

ಗಂಜಿಮಠದಲ್ಲಿ ‘ಝಾರಾ ಕನ್ವೆಂಶನ್ ಸೆಂಟರ್’ ಉದ್ಘಾಟನೆ

Photo Credit :

ಮಂಗಳೂರು:ಗಂಜಿಮಠದಲ್ಲಿ ‘ಝಾರಾ ಕನ್ವೆಂಶನ್ ಸೆಂಟರ್’ ಉದ್ಘಾಟನೆ ಸುಮಾರು ೩ ಎಕ್ರೆ ವಿಶಾಲವಾದ ಜಮೀನಿನಲ್ಲಿ  ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ಕಟ್ಟಡದೊಂದಿಗೆ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮಂಗಳೂರು-ಮೂಡಬಿದರೆ ರಾಷ್ಟ್ರೀಯ ಹೆದ್ದಾರಿಯ ಬಳಿ  ನಿರ್ಮಾಣವಾಗುತ್ತಿರುವ ಸಭಾಂಗಣವು ಡಿ. ೨೬ರಂದು ಸಂಜೆ ೬.೩೦ಕ್ಕೆ ಉದ್ಠಾಟನೆಗೊಳ್ಳಲಿದೆ.

ಹಲವು ಸಭಾಂಗಣಗಳ ಸಂಕೀರ್ಣವಾದ, ಸಂಪೂರ್ಣ ಹವಾ ನಿಯಂತ್ರಿತ ಸಭಾಂಗಣದಲ್ಲಿ ಅಲಂಕೃತ ದೀಪಾಲಂಕಾರ, ವೈಫೈ ಸೌಕರ್ಯ, ಎಲ್‌ಇಡಿ ಪರದೆ, ವರ್ಟಿಕಲ್ ಗಾರ್ಡನ್, ಸ್ಟೋನ್ ಫೌಂಟೈನ್, ೨೪ ತಾಸುಗಳ ವಿದ್ಯುತ್ ವ್ಯವಸ್ಥೆ, ವಿಶಾಲವಾದ ಅಡುಗೆ ಕೋಣೆ, ಸಸ್ಯಾಹಾರಿ ಮತ್ತು ಶಾಕಾಹಾರಿ ಊಟೋಪಚಾರಕ್ಕೆ ಪ್ರತ್ಯೇಕ ಊಟದ ಕೋಣೆಗಳಿವೆ. ಸುಮಾರು ೬೫೦ ಕಾರುಗಳ ಪಾರ್ಕಿಂಗ್‌ಗೆ ವ್ಯವಸ್ಥೆಯಿದ್ದು, ಮುಖ್ಯ ಸಭಾಂಗಣ ‘ರ‍್ಚಿಡ್’ನಲ್ಲಿ ೭೦೦, ಒಂದನೇ ಮಹಡಿಯ ‘ಸಾಫ್ರಾನ್’ ಸಭಾಂಗಣದಲ್ಲಿ ೬೫೦, ನೆಲ ಅಂತಸ್ತಿನ ‘ಟುಲಿಪ್’ ಸಭಾಂಗಣದಲ್ಲಿ ೮೦೦, ಪಾರ್ಟಿ ಹಾಲ್ ‘ಐರಿಸ್’ನಲ್ಲಿ ೩೦೦, ಬ್ಲೂಬೆಲ್ಲ್ ಸಭಾಂಗಣದಲ್ಲಿ ೨೦೦, ಸ್ನೇಹ ಕೂಟದ ‘ಪರ್ಪಲ್’ ಸಭಾಂಗಣದಲ್ಲಿ ೫೦೦, ಲ್ಯಾವೆಂಡರ್ ಸೆಮಿನಾರ್ ಸಭಾಂಗಣದಲ್ಲಿ ೫೦೦ ಹಾಗೂ ‘ಝೀ ಗ್ರೌಂಡ್’ ಹೊರಾಂಗಣದಲ್ಲಿ ೬೦೦ ಆಸನಗಳ ವ್ಯವಸ್ಥೆಯಿರುತ್ತದೆ. ಅತಿಥಿಗಳಿಗೆ ವಾಸ್ತವ್ಯಕ್ಕಾಗಿ ಸಭಾಂಗಣದಲ್ಲಿ ಮೂರು ಎಕ್ಸಿಕ್ಯುಟಿವ್ ಸೂಟ್ ರೂಮ್‌ಗಳಿರುತ್ತವೆ.

ದೇಶದ ಗಣ್ಯ ಮುಸ್ಲಿಮ್ ಧಾರ್ಮಿಕ ನೇತಾರ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಖಾಝಿ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮತ್ತು ಡಿಕೆಎಸ್‌ಸಿ ಅಧ್ಯಕ್ಷ ಕೆ.ಎಸ್. ಆಟಕೋಯ ತಂಗಳ್ ಕುಂಬೋಳ್ ಸಭಾಂಗಣ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸದ ನಳೀನ್ ಕುಮಾರ್ ಕಟೀಲು, ಸಚಿವರಾದ ಅಂಗಾರ ಎಸ್., ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿ. ಸುನಿಲ್ ಕುಮಾರ್, ಮಾಜಿ ಸಚಿವರಾದ ಯು.ಟಿ, ಖಾದರ್, ಬಿ. ರಮನಾಥ ರೈ, ಅಭಯಚಂದ್ರ ಜೈನ್, ಶಾಸಕರಾದ ಯು. ರಾಜೇಶ್ ನಾಯಕ್, ಡಿ. ವೇದವ್ಯಾಸ ಕಾಮತ್, ಲಾಲಾಜಿ ಮೆಂಡನ್ ಮತ್ತು ಉಮನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಬಿ.ಎಂ. ಫಾರೂಕ್ ಮತ್ತು ವಿ. ಮಂಜುನಾಥ ಭಂಡಾರಿ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ಮಾಜಿ ಶಾಸಕರಾದ ಜೆ.ಆರ್. ಲೋಬೊ, ವಿನಯ ಕುಮಾರ್ ಸೊರಕೆ ಮತ್ತು ಬಿ.ಎ. ಮೊಹಿದಿನ್ ಬಾವಾ, ಕೆಪಿಸಿಸಿ ಎನ್‌ಆರ್‌ಐ ಫೋರಂನ ನಿಕಟಪೂರ್ವ ಅಧ್ಯಕ್ಷೆ ಡಾ. ಆರತಿ ಕೃಷ್ಣ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹಿಂ, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ವೈಟ್‌ಸ್ಟೋನ್  ಡೆವೆಲರ‍್ಸ್ನ ಆಡಳಿತ ನಿರ್ದೇಶಕ ಬಿ.ಎಂ. ಶರೀಫ್, ಸೂರಲ್ಪಾಡಿ ಜುಮಾ ಮಸೀದಿಯ ಖತೀಬ್ ಮೌಲಾನಾ ಉಸ್ಮಾನ್ ದಾರಿಮಿ ಹಾಗೂ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ನೋನಯ್ಯ ಕೋಟ್ಯಾನ್ ಮತ್ತು ಸದಸ್ಯೆ ಅನಿತಾ ಡಿ’ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸ ಲಿದ್ದಾರೆ. ಝಾರಾ ಕನ್ವೆಂಶನ್ ಸೆಂಟರ್‌ನ ಅಧ್ಯಕ್ಷ ಬಿ.ಝಕರಿಯಾ ಜೋಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸನ್ಮಾನ:
ಕಾರ್ಯಕ್ರಮದಲ್ಲಿ ಪದ್ಮವಿಭೂಷಣ ಪುರಸ್ಕೃತ ಡಾ. ಬಿ.ಎಂ. ಹೆಗ್ಡೆ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ರಾಜ್ಯ ವಕ್ಫ್ ಬೋರ್ಡ್ನ ನೂತನ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಹಾಗೂ ಶಾಸಕ ಡಾ. ಭರತ್ ಶೆಟ್ಟಿ ವೈ.ಯವರನ್ನು ಸನ್ಮಾನಿಸಲಾಗುವುದು.

ಪತ್ರಿಕಾಗೋಷ್ಟಿಯಲ್ಲಿ ಝಾರಾ ಕನ್ವೆಂಶನ್ ಸೆಂಟರ್  ಬಿ.ಝಕರಿಯಾ ಜೋಕಟ್ಟೆ, ನಿರ್ದೇಶಕ ಝಹೀರ್ ಝಕರಿಯಾ, ನಝೀರ್ ಝಕರಿಯಾನಝೀರ್ ಝಕರಿಯಾ, ಝಾಹಿದ್ ಝಕರಿಯಾ ಭಾಗವಹಿಸಿದ್ದರು.

ಗಂಜಿಮಠದಲ್ಲಿ ‘ಸೌಹಾರ್ದ ಸಾಮೂಹಿಕ ವಿವಾಹ’ ಆರ್ಥಿಕವಾಗಿ ತೀರಾ ಹಿಂದುಳಿದಿರುವ ಬಡ ಕುಟುಂಬದ ಹೆಣ್ಮಕ್ಕಳ ಮದುವೆಗೆ  ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಝಾರಾ ಚಾರಿಟೆಬಲ್ ಫೌಂಡೇಶನ್ ಹಮ್ಮಿಕೊಂಡಿರುವ ೧೫ ಜೋಡಿಗಳ ‘ಸೌಹಾರ್ದ ಸಾಮೂಹಿಕ ವಿವಾಹ’ ಸಮಾರಂಭವು
ಡಿ. ೨೭ರಂದು ಬೆಳಿಗ್ಗೆ ೧೦.೦೦ಕ್ಕೆ ಮಂಗಳೂರು-ಮೂಡಬಿದರೆ ರಾಷ್ಟ್ರೀಯ ಹೆದ್ದಾರಿಯ ಗಂಜಿಮಠದಲ್ಲಿ ನಿರ್ಮಾಣಗೊಂಡಿರುವ ‘ಝಾರಾ ಕನ್ವೆಂಶನ್ ಸೆಂಟರ್’ ಸಭಾಂಗಣದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಹೊರತು ಪಡಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯಲಿರುವ ಸೌಹಾರ್ದ ಸಾಮೂಹಿಕ ವಿವಾಹ ಇದಾಗಿದ್ದು, ಜೋಡಿಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಮುಗಿದಿದೆ.

ವಧುವಿಗೆ ಮದುವೆ ವಸ್ತ್ರ ಖರೀದಿಗೆ ನಗದು ನೀಡಲಾಗಿದ್ದು, ವರನಿಗೆ ಮದುವೆ ವಸ್ತ್ರ, ವಾಚು ಮತ್ತು ನಗದು ಉಡುಗೊರೆ ಹಾಗೂ ವಧುವಿಗೆ ಚಿನ್ನದ
ಆಭರಣ ಝಾರಾ ಚಾರಿಟೆಬಲ್ ಫೌಂಡೇಶನ್ ವತಿಯಿಂದ ನೀಡಲಾಗುತ್ತದೆ. ಸಮಾರಂಭವನ್ನು ಬೆಂಗಳೂರಿನ ಅವಧೂತ ಶ್ರೀ ವಿನಯ ಗುರೂಜಿ, ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಖಾಝಿ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮತ್ತು ಗುರುಪುರ ಕೈಕಂಬದ ಅವರ್ ಲೇಡಿ ಆಫ್ ಪಾಂಪೈ ಚರ್ಚಿನ ಧರ್ಮಗುರು ಫಾ. ಆಂಟನಿ ಲೋಬೊ ಉದ್ಘಾಟಿಸಲಿದ್ದಾರೆ. ಝಾರಾ ಚಾರಿಟೆಬಲ್ ಫೌಂಡೇಶನ್ ಅಧ್ಯಕ್ಷ ಬಿ.ಝಕರಿಯಾ ಜೋಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಯೇನೆಪೋಯಾ ವಿಶ್ವವಿದ್ಯಾನಿಲಯದ ಕುಲಪತಿ ವೈ. ಅಬ್ದುಲ್ಲ ಕುಂಞ. ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವಾ, ಎ.ಜೆ. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ, ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಕಣಚೂರು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯು.ಕೆ. ಮೋನು, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಂಗಳೂರು ಪೋಲಿಸ್ ಕಮಿಶನರ್ ಶಶಿ ಕುಮಾರ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು, ಮ.ನ.ಪಾ. ಮೇಯರ್ ಪ್ರೇಮಾನಂದ ಶೆಟ್ಟಿ, ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ, ಮುಸ್ಲಿಮ್  ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ಎಸಿಪಿ ಮಹೇಶ್ ಕುಮಾರ್, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್. ಬೆಂಗಳೂರು ಹಮೀದ್ ಶಾ
ಕಾಂಪ್ಲೆಕ್ಸ್ ಅಧ್ಯಕ್ಷ ಜಿ.ಎ. ಬಾವಾ, ಅಭಿಮಾನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಉಮ್ಮರ್ ಬಿ.ಎಂ., ರೋಟರಿ ಜಿಲ್ಲಾಧ್ಯಕ್ಷ ಕೆ. ರವೀಂದ್ರ ಭಟ್, ಲಯನ್ಸ್ ಜಿಲ್ಲಾ ಗವರ್ನರ್ ವಸಂತ ಶೆಟ್ಟಿ, ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ, ಬಜ್ಪೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ., ಬಲವಂಡಿ ಮುಕ್ಕಾಲ್ದಿ ಬಾಲಕೃಷ್ಣ ಬಿ. ಶೆಟ್ಟಿ ಅಲಿಕೆಗುತ್ತು, ಹಿದಾಯಾ ಫೌಂಡೇಶನ್‌ನ ಅಧ್ಯಕ್ಷ ಮನ್ಸೂರ್ ಅಹ್ಮದ್, ವೈಟ್ ಸ್ಟೋನ್ ಬಿಲ್ರ‍್ಸ್ ನ ಆಡಳಿತ ನಿರ್ದೇಶಲ್ ಬಿ.ಎಂ. ಶರೀಫ್, ನಂಡೊ ಪೆಂಙಲ್ ಅಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು