News Karnataka Kannada
Saturday, April 27 2024
ಕಲಬುರಗಿ

ನಕಲಿ ಪಿಸ್ತೂಲ್ ಹಿಡಿದು ರೀಲ್ಸ್ ಮಾಡಿದ ಯುವಕರ ವಿರುದ್ಧ ಎಫ್‌ಐಆರ್

ಜಿಲ್ಲೆಯ ಸೇಡಂ ಪಟ್ಟಣದ ಮೂಲದ ಇಬ್ಬರು ಯುವಕರು ಸೇರಿಕೊಂಡು ನಕಲಿ ಪಿಸ್ತೂಲ್ ಹಿಡಿದು ರೀಲ್ಸ್ ಜೊತೆಗೆ ಫೋಟೋ ಶೂಟ್​ ಮಾಡಿ ಫೆಸ್‌ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. 
Photo Credit : NewsKarnataka

ಕಲಬುರಗಿ: ಜಿಲ್ಲೆಯ ಸೇಡಂ ಪಟ್ಟಣದ ಮೂಲದ ಇಬ್ಬರು ಯುವಕರು ಸೇರಿಕೊಂಡು ನಕಲಿ ಪಿಸ್ತೂಲ್ ಹಿಡಿದು ರೀಲ್ಸ್ ಜೊತೆಗೆ ಫೋಟೋ ಶೂಟ್​ ಮಾಡಿ ಫೆಸ್‌ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಿಸ್ತೂಲ್ ಹಿಡಿದು ರೀಲ್ಸ್ ಮಾಡಿದ ವಿಡಿಯೋಗಳನ್ನ ನೋಡಿದ ಸಾರ್ವಜನಿಕರು, ಯುವಕರ ಹುಚ್ಚಾಟ ಕಂಡು ಅಕ್ಷರಶಃ ಬೆಚ್ಚಿಬಿದ್ದಿದ್ದರು. ಇದನ್ನ ನೋಡಿದ ಪೊಲೀಸರು, ರೀಲ್ಸ್ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಇಬ್ಬರು ಯುವಕರನ್ನು ಮಹೇಶ್ ಮತ್ತು ಬಸವರಾಜ್ ಎಂದು ಗುರುತಿಸಲಾಗಿದೆ.

ಸೇಡಂ ಪಟ್ಟಣದ ಇಂದಿರಾನಗರ ಬಡಾವಣೆಯ ನಿವಾಸಿಗಳಾದ ಮಹೇಶ್ ಮತ್ತು ಬಸವರಾಜ್ ಕಾಲೇಜು ಮುಗಿಸಿ, ಕೆಲಸ ಹುಡುಕದೇ ಬಿಡಾಡಿ ಥರ ಓಡಾಡಿಕೊಂಡು ಶೋಕಿ ಜೀವನ ಸಾಗಿಸುತ್ತಿದ್ದರು. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಲು ಹೋಗಿದ್ದ ಈ ಯುವಕರನ್ನ ಠಾಣೆಗೆ ಕರೆಯಿಸಿ ಪೊಲೀಸರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಎಫ್‌ಐಆರ್ ದಾಖಲಿಸಿ ಮುಂದೆ ಈ ರೀತಿಯಲ್ಲಿ ಹುಚ್ಚುಚ್ಚು ರೀಲ್ಸ್ ಮಾಡಿದ್ರೆ ಜೈಲೂಟ ಗ್ಯಾರಂಟಿ ಎಂದು ಖಡಕ್ ಆಗಿ ವಾರ್ನ್ ಮಾಡಿ ಕಳುಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು