News Karnataka Kannada
Saturday, April 13 2024
Cricket
ಬೀದರ್

ದಾಖಲೆ ಇಲ್ಲದೇ ಹಣ ಸಾಗಟ: ಲಕ್ಷಾಂತರ ರೂಪಾಯಿ ನಗದು ಪೊಲೀಸರ ವಶಕ್ಕೆ

ಇಚರ್ ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 14.26 ಲಕ್ಷ ರೂಪಾಯಿ ನಗದು ಸಹಿತ ವಾಹನವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೀದರ್ ನ ಹುಲಸೂರು ತಾಲೂಕಿನ ಅಂಬೇವಾಡಿ ಚೆಕ್ ಪೋಸ್ಟ್ ಬಳಿ ನಡೆದಿದೆ.
Photo Credit : News Kannada

ಬೀದರ್: ಇಚರ್ ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 14.26 ಲಕ್ಷ ರೂಪಾಯಿ ನಗದು ಸಹಿತ ವಾಹನವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೀದರ್ ನ ಹುಲಸೂರು ತಾಲೂಕಿನ ಅಂಬೇವಾಡಿ ಚೆಕ್ ಪೋಸ್ಟ್ ಬಳಿ ನಡೆದಿದೆ.

ಲೋಕಸಭೆ ಚುನಾವಣೆ ಸುಮೀಪಿಸುತ್ತಿರುವ ನಿಟ್ಟಿನಲ್ಲಿ ಹುಲಸೂರು ತಾಲೂಕಿನ ಅಂಬೇವಾಡಿ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಸವಕಲ್ಯಾಣದಿಂದ ಮಹಾರಾಷ್ಟ್ರದ ಲಾತೂರ್ಗೆ ತೆರಳುತ್ತಿದ್ದ ಇಚರ್ ಗೂಡ್ಸ್ ವಾಹನದಲ್ಲಿ 5.26 ಲಕ್ಷ ರೂಪಾಯಿ ಮೌಲ್ಯದ ಆರ್‌ಎಮ್ಡಿ, ವಿಮಲ್ ಪಾನ್ ಮಸಾಲಾ ಮತ್ತು ತಂಬಾಕು ಇದರ ಜೊತೆಗೆ 14.26 ಲಕ್ಷ ನಗದನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ವಾಹನ ಸೇರಿ ಒಟ್ಟು 31 ಲಕ್ಷ 53 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಈ ಬಗ್ಗೆ ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು