Bengaluru 22°C
Ad

ಪುಣ್ಯಕ್ಷೇತ್ರಗಳ ಯಾತ್ರಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್​ ನ್ಯೂಸ್

Tmpl

ಬೆಂಗಳೂರು: ರಾಜ್ಯ ಸರ್ಕಾರವು ಪುಣ್ಯಕ್ಷೇತ್ರಗಳ ಯಾತ್ರಾರ್ಥಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದೆ. ಯಾತ್ರಾರ್ಥಿಗಳಿಗೆ ನೀಡಲಾಗುವ ಸಹಾಯಧನ ಪಾವತಿಯನ್ನು ಮತ್ತಷ್ಟು ಸರಳೀಕೃತ ಮಾಡುವ ನಿಟ್ಟಿನಿಂದ ರಾಜ್ಯ ಮುಜರಾಯಿ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಯಾತ್ರಾರ್ಥಿಗಳು ಇನ್ಮುಂದೆ ಕಚೇರಿಗಳಿಗೆ ಹೋಗುವ ವ್ಯವಸ್ಥೆಗೆ ಬ್ರೇಕ್ ಬೀಳಲಿದೆ. ಎಲ್ಲವನ್ನೂ ಡಿಜಿಟಲೀಕರಣ ಮಾಡಲು ಹೊಸ ವಿಧಾನವನ್ನು ಪರಿಚಯಿಸಲಿದೆ.

Ad
300x250 2

ಹೊಸ ವಿಧಾನ ಹೇಗೆ?
ಯಾತ್ರಾರ್ಥಿಗಳು ಮಾಡಬೇಕಿರುವ ಕೆಲಸ ತುಂಬಾ ಸುಲಭ. ಅವುಗಳನ್ನು ಹಂತ-ಹಂತವಾಗಿ ಈ ಕೆಳಗೆ ನೀಡಲಾಗಿದೆ.
ಮೊಬೈಲ್ ಆಯಪ್ ಮೂಲಕ ನೋಂದಣಿ ಮಾಡಿಕೊಂಡು, ಜಿಯೋಲೊಕೇಶನ್‌ ‌ ಮಾಹಿತಿಯನ್ನು ಪೂರ್ಣಗೊಳಿಸಬೇಕು.
ಸೆಲ್ಫಿ ಒಳಗೊಂಡಿರುವ ಫೋಟೋವನ್ನು ಅಪ್‌ಲೋಡ್ ಮಾಡಿ
ಈ ಮೂಲಕ ಯಾತ್ರಾ ಸ್ಥಳದಲ್ಲಿ ಯಾತ್ರಾರ್ಥಿಗಳ ಉಪಸ್ಥಿತಿಯನ್ನು ಖಚಿತಪಡಿಸಬೇಕು
ಫೋಟೋದಲ್ಲಿ ನಿಮ್ಮ ಹಿಂಭಾಗ ದೇವಾಲಯದ ಪ್ರಮುಖ ಸ್ಥಳವನ್ನು ಕಾಣುವಂತೆ ಅಪ್‌ಲೋಡ್ ಮಾಡಿ
ಪ್ರವರ್ಗ ಸಿ ದೇವಾಲಯದ ಅರ್ಚಕರು / ನೌಕರರು ಹಾಗೂ ಅವರ ಕುಟುಂಬದ ಒಬ್ಬರಿಗೆ ಒಟ್ಟು 2400 ರೂ. ನಿಗದಿಪಡಿಸಲಾಗಿದೆ. ವರ್ಷದಲ್ಲಿ ಒಂದು ಬಾರಿ ಉಚಿತ ಕಾಶಿ ಯಾತ್ರೆಗೆ ಅವಕಾಶ ನೀಡಲಾಗಿದೆ.
ಚಾರ್ ಧಾಮ್ ಯಾತ್ರೆಗೆ ರೂ. 30,000
ಕೈಲಾಸ ಮಾನಸ ಸರೋವರ ಯಾತ್ರೆಗೆ ರೂ‌ 20,000
ಕಾಶಿ ಯಾತ್ರೆಯಲ್ಲಿ ಗಯಾ ಸೇರಿಸಿ ರೂ.5,000
ರೈಲು ಮೂಲಕ ಯಾತ್ರೆ ಕೈಗೊಳುವ ಯಾತ್ರಾರ್ಥಿಗಳಿಗೆ ರೂ.5000 ದಿಂದ ರೂ 7500 ಕ್ಕೆ ಸಹಾಯಧನ ಹೆಚ್ಚಳ ಮಾಡಲಾಗಿದೆ. ಒಟ್ಟು 30000ಕ್ಕೂ ಹೆಚ್ಚು ಯಾತ್ರಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

Ad
Ad
Nk Channel Final 21 09 2023
Ad