ಧಾರವಾಡ : ಪದೇ ಪದೇ ವಿಡಿಯೋಗ್ರಾಫರ್ ಮೇಲೆ ಹಲ್ಲೆ ನಡೆಯುತ್ತಿದೆ. ಈ ಕುರಿತು ಗಂಭೀರವಾಗಿ ಪರಿಗಣಿಸಬೇಕು ಇಲ್ಲವೇ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ನಡೆಸಬೇಕಾಗುತ್ತದೆ ಎಂದು ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.
ಧಾರವಾಡ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಸದಸ್ಯರು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮದುವೆ ಸಮಾರಂಭದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವಿಡಿಯೋಗ್ರಾಫರ್ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಧಾರವಾಡ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷರಾದ ರಾಹುಲ್ ದತ್ತಪ್ರಸಾದ, ಕಾರ್ಯಾಧ್ಯಕ್ಷ ರವಿ ಯಾಲಕ್ಕಿಶೆಟ್ಟರ್, ಉಪಾಧ್ಯಕ್ಷ ಲಕ್ಷ್ಮಣ ದಾನಪ್ಪಗೌಡರ್, ಕಾರ್ಯದರ್ಶಿ ಬೂಸ್ಕೋ ಸೊಲೋಮನ್, ಸಹ ಕಾರ್ಯದರ್ಶಿ ಉಮೇಶ್ ಚಿಕ್ಕೋಡಿ. ಖಜಾಂಚಿ ಮೋಹನ್ ಕರಾಟೆ ಮತ್ತು ಸದಸ್ಯರಾದ, ಮುರಳಿ ಮಲಜಿ, ಶ್ರೀನಿವಾಸ ಮಲಜಿ, ನಂದಿಕೇಶ್ವರ ಹೆಗಡೆ, ಅಮೃತ ಕಾಟಿಗಾರ ಹಲವರು ಇದ್ದರು.