Bengaluru 22°C
Ad

ಬಾಲಕರ ವಸತಿ ನಿಲಯದಲ್ಲಿ ಕಳಪೆ ಆಹಾರ: ಧಾರವಾಡ ಸಪ್ತಾಪುರದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಪ್ರತಿಭಟನೆ

ತಿನ್ನಲು ಯೋಗ್ಯವಲ್ಲದ ಹಾಗೂ ಗುಣಮಟ್ಟ ಇಲ್ಲದ ಉಪಹಾರ ನೀಡಿದ ಹಿನ್ನೆಲೆಯಲ್ಲಿ ಉಪಹಾರದ ದೊಡ್ಡ ಪಾತ್ರೆಯನ್ನೇ ವಿದ್ಯಾರ್ಥಿಗಳು ಧಾರವಾಡ ಸಪ್ತಾಪುರದ ಪರಿಶಿಷ್ಟ ವರ್ಗದ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದ ಎದುರು ಇಟ್ಟು ಪ್ರತಿಭಟನೆ ನಡೆಸಿದರು.

ಧಾರವಾಡ : ತಿನ್ನಲು ಯೋಗ್ಯವಲ್ಲದ ಹಾಗೂ ಗುಣಮಟ್ಟ ಇಲ್ಲದ ಉಪಹಾರ ನೀಡಿದ ಹಿನ್ನೆಲೆಯಲ್ಲಿ ಉಪಹಾರದ ದೊಡ್ಡ ಪಾತ್ರೆಯನ್ನೇ ವಿದ್ಯಾರ್ಥಿಗಳು ಧಾರವಾಡ ಸಪ್ತಾಪುರದ ಪರಿಶಿಷ್ಟ ವರ್ಗದ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದ ಎದುರು ಇಟ್ಟು ಪ್ರತಿಭಟನೆ ನಡೆಸಿದರು.

ಧಾರವಾಡ ಹೇಳಿ ಕೇಳಿ ವಿದ್ಯಾಕಾಶಿ. ಇಲ್ಲಿ ಮೆಟ್ರಿಕ್‌ ನಂತರದ ಶಿಕ್ಷಣಕ್ಕೆ ರಾಜ್ಯದ ಮೂಲೆ ಮೂಲೆಯಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ಹಾಗೆ ಬಂದ ಬಡ ವಿದ್ಯಾರ್ಥಿಗಳು ಆಸರೆ ಪಡೆಯೋದು ಸರ್ಕಾರಿ ಹಾಸ್ಟೆಲ್‌ಗಳಲ್ಲಿ. ಸರ್ಕಾರ ಅದಕ್ಕಾಗಿಯೇ ಗುಣಮಟ್ಟದ ಊಟೋಪಚಾರ ನೀಡುತ್ತದೆ.

P 1

ಆದರೆ, ಸರ್ಕಾರ ಕೊಟ್ಟಿದ್ದನ್ನೂ ವಿದ್ಯಾರ್ಥಿಗಳಿಗೆ ಸರಿಯಾಗಿ ನೀಡದೇ ಇದ್ದರೆ ಹೇಗೆ ಎಂದು ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡರು.

ಉಪಹಾರದ ಗುಣಮಟ್ಟ ಪರೀಕ್ಷಿಸಿದ ಅಧಿಕಾರಿಗಳು, ಕೂಡಲೇ ಸಂಬಂಧಿಸಿದ ವಾರ್ಡನ್‌ಗೆ ನೋಟೀಸ್ ನೀಡಲಾಗುವುದು. ಅಲ್ಲದೇ ಈಗ ಇರೋ ಅಡುಗೆ ತಯಾರಕರನ್ನು ಬದಲಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

Ad
Ad
Nk Channel Final 21 09 2023
Ad