Bengaluru 23°C
Ad

ದಾಬಾಗಳಲ್ಲಿ ಸಾರಾಯಿ ಮಾರಾಟ ಮಾಡಿದರೆ ಕ್ರಮ: ಪಿಎಸ್‌ಐ ಅಯ್ಯಪ್ಪ

Bidar

ಹುಮನಾಬಾದ್: ವಾಹನ ಅಪಘಾತಗಳು ಹೆಚ್ಚಾಗುತ್ತಿವೆ. ಹೀಗಾಗಿ ದಾಬಾಗಳಲ್ಲಿ ಸಾರಾಯಿ ಮಾರಾಟ ಮಾಡಬಾರದು ಎಂದು ಪಿಎಸ್‌ಐ ಅಯ್ಯಪ್ಪ ತಿಳಿಸಿದರು.

ತಾಲ್ಲೂಕಿನ ಹಳ್ಳಿಖೇಡ್ ಬಿ. ಪೊಲೀಸ್ ಠಾಣೆಯಲ್ಲಿ ಭಾನುವಾರ ದಾಬಾಗಳ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

‘ದಾಬಾಗಳಲ್ಲಿ ಸಾರಾಯಿ ಮಾರಾಟ ನಿಷೇಧವಿದ್ದರೂ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ.

ಹೀಗಾಗಿ ಕಾನೂನು ಬಾಹಿರ ಚಟುವಟಿಕೆ ಮಾಡಬಾರದು.‌ ಒಂದು ವೇಳೆ ದಾಬಾಗಳಲ್ಲಿ ಸಾರಾಯಿ ಮಾರಾಟ ಕಂಡುಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಹಳ್ಳಿಖೆಡ್ ಬಿ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್ಲ ದಾಬಾಗಳ ಮಾಲೀಕರು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ರಸ್ತೆ ನಿಯಮ ಪಾಲಿಸಿ, ನಿಗದಿತ ಸಮಯಕ್ಕೆ ದಾಬಾ ಮುಚ್ಚಬೇಕು’ ಎಂದು ಸೂಚಿಸಿದರು.

Ad
Ad
Nk Channel Final 21 09 2023
Ad