Ad

ಅರಣ್ಯ ಸಚಿವರ ತವರಲ್ಲೇ ಕಾಡುಹಂದಿಗಳ ಉಪಟಳ : ಮೂವರಿಗೆ ಗಂಭೀರ ಗಾಯ

ಅರಣ್ಯ ಸಚಿವ ಈಶ್ವರ್ ಖಂಡ್ರೆ ತವರು ಜಿಲ್ಲೆಯಲ್ಲಿ ಹೆಚ್ಚಾದ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು,ಜಿಲ್ಲೆಯ ಎರಡು ಕಡೆ ಕಾಡುಹಂದಿ ಪ್ರತ್ಯೇಕ ದಾಳಿನಡೆಸಿವೆ. ದಾಳಿಯಿಂದ ಓರ್ವ ಮಹಿಳೆ ಸೇರಿ ಮೂವರಿಗೆ ಗಂಭೀರ ಗಾಯಗೊಂಡಿದ್ದಾರೆ.ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ಔರಾದ್ ತಾಲೂಕಿನಲ್ಲಿ ಘಟನೆ ನಡೆದಿದೆ.

ಬೀದರ್‌:   ಅರಣ್ಯ ಸಚಿವ ಈಶ್ವರ್ ಖಂಡ್ರೆ ತವರು ಜಿಲ್ಲೆಯಲ್ಲಿ ಹೆಚ್ಚಾದ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು,ಜಿಲ್ಲೆಯ ಎರಡು ಕಡೆ ಕಾಡುಹಂದಿ ಪ್ರತ್ಯೇಕ ದಾಳಿನಡೆಸಿವೆ. ದಾಳಿಯಿಂದ ಓರ್ವ ಮಹಿಳೆ ಸೇರಿ ಮೂವರಿಗೆ ಗಂಭೀರ ಗಾಯಗೊಂಡಿದ್ದಾರೆ.ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ಔರಾದ್ ತಾಲೂಕಿನಲ್ಲಿ ಘಟನೆ ನಡೆದಿದೆ.

Ad
300x250 2

ಜಮೀನಿನನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಹಂದಿ ಮೂವರ ಮೇಲೆ ಏಕಾಏಕಿ ದಾಳಿ ನಡೆಸಿದೆ.ಬಸವಕಲ್ಯಾಣ ತಾಲೂಕಿನ ದಾಸರವಾಡಿ ಗ್ರಾಮದ ತುಕ್ಕಾಬಾಯಿ, ಸಂಜೀವ್ ಎಂಬುವವರಿಗೆ ಗಾಯಗಳಾಗಿದ್ದು,ಕಾಡುಹಂದಿ ದಾಳಿಯಿಂದ ಕೈ, ಹೊಟ್ಟೆ, ತೊಡೆ ಭಾಗದಲ್ಲಿ ಗಾಯಗಳಾಗಿವೆ.

ಇನ್ನು ಔರಾದ್ ತಾಲೂಕಿನ ಬೇಲೂರ್ ಗ್ರಾಮದ ಭೀಕ್ಕುಸಾಬ್ ಫತೆಲಿ (60) ಎಂಬುವವರಿಗೂ ದಾಳಿ ನಡೆಸಿ ಗಾಯಗಳಾಗಿವೆ.ಗಂಭೀರವಾಗಿ ಗಾಯಗೊಂಡಿದ್ದ ದಾಸರವಾಡಿ ಗ್ರಾಮದ ಸಂಜೀವ್ ಎಂಬುವವರು ಹೈದರಾಬಾದ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ.ಇನ್ನುಳಿದ ಇಬ್ಬರು ಗಾಯಾಳುಗಳಿಗೆ ಬೀದರ್ ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Ad
Ad
Nk Channel Final 21 09 2023
Ad