ಕುಣಿಗಲ್ : ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಭೀಕರ ಅಪಘಾತವಾಗಿದ್ದು, ಕಾರೊಂದು ಟೆಂಪೋ ಟ್ರಾವಲ್ಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 8 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಕುಣಿಗಲ್ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 75 ಹೇರೂರು ಬೈಪಾಸ್ ನಲ್ಲಿ ಇಂದು ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಇನ್ನೋವಾ ಕಾರು ಚಾಲಕ ಸುನೀಲ್ (30) ಮೃತಪಟ್ಟ ದುರ್ದೈವಿಯಾಗಿದ್ದು, ಮತ್ತೊಬ್ಬನ ಹೆಸರು ತಿಳಿದುಬಂದಿಲ್ಲ.
ಇನ್ನೋವಾ ಕಾರು ಬೆಂಗಳೂರಿನಿಂದ ಹಾಸನ ಕಡೆ ಹೊರಟ್ಟಿದ್ದು, ಚಾಲಕನ ನಿಯಂತ್ರಣ ತಪ್ಪಿ ನಾಗಮಂಗಲದಿಂದ ಬೆಂಗಳೂರು ಮದುವೆಗೆ ಹೊರಟ್ಟಿದ್ದ ಟೆಂಪೋ ಟ್ರಾವಲ್ಸ್ ಗೆ ಡಿಕ್ಕಿ ಹೊಡೆದಿದೆ.