News Karnataka Kannada
Sunday, April 28 2024
ತುಮಕೂರು

ಎಮ್ಮೆಗಳಿಗೆ ಮೈತೊಳೆಯಲು ಹೋಗಿ ಕೆರೆಗೆ ಬಿದ್ದು ಸಹೋದರರಿಬ್ಬರು ಸಾವು

15 missing after tractor trolley falls into river in UP
Photo Credit : IANS

ತುಮಕೂರು : ಎಮ್ಮೆಗಳಿಗೆ ಮೈತೊಳೆಯಲು ಹೋಗಿ ಕೆರೆಗೆ ಬಿದ್ದು ಸಹೋದರರಿಬ್ಬರು ಮೃತಪಟ್ಟ ಘಟನೆ ಶಿರಾ ತಾಲ್ಲೂಕಿನ ಮದಲೂರು ಗ್ರಾಮದಲ್ಲಿ ನಡೆದಿದೆ.

ಎಂ.ದಾಸರಹಳ್ಳಿ ಗ್ರಾಮದ ಗಂಗರಾಜು (27) ಹಾಗೂ ಹನುಮಂತರಾಜು (21) ಮದಲೂರು ಚಿಕ್ಕ ಕೆರೆಯಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟ ಸಹೋದರರು.

ಎಮ್ಮೆಗಳಿಗೆ ಮೈತೊಳೆಯಲು ಹೋದಾಗ ಹನುಮಂತರಾಜು ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಹೋದ ಅಣ್ಣ ಗಂಗರಾಜು ಸಹ ನೀರಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ. ಕೆರೆಯಲ್ಲಿರುವ ಆಳವಾದ ಗುಂಡಿಗಳಿಗೆ ಬಿದ್ದ ಪರಿಣಾಮ ಅವರನ್ನು ರಕ್ಷಿಸಲು ಆಗಲಿಲ್ಲ ಎಂದು ಹೇಳಲಾಗುತ್ತಿದೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು