Bengaluru 22°C
Ad

ಕರ್ನಾಟಕದ ಕೈ ತಪ್ಪಿದ ಗೂಗಲ್ ಹೂಡಿಕೆ: ತಮಿಳುನಾಡಿನಲ್ಲಿ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ

ಗೂಗಲ್ ಕಂಪನಿ, ಫಾಕ್ಸ್‌ಕಾನ್‌ ಸಂಸ್ಥೆಯ ಸಹಯೋಗದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ ಹಾಗೂ ಡ್ರೋನ್ ತಯಾರಿಕಾ ಘಟಕವನ್ನು ನೆರೆಯ ತಮಿಳುನಾಡಿನಲ್ಲಿ ಸ್ಥಾಪಿಸಲಿದೆ.

ಬೆಂಗಳೂರು: ಗೂಗಲ್ ಕಂಪನಿ, ಫಾಕ್ಸ್‌ಕಾನ್‌ ಸಂಸ್ಥೆಯ ಸಹಯೋಗದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ ಹಾಗೂ ಡ್ರೋನ್ ತಯಾರಿಕಾ ಘಟಕವನ್ನು ನೆರೆಯ ತಮಿಳುನಾಡಿನಲ್ಲಿ ಸ್ಥಾಪಿಸಲಿದೆ.

ಇದರಿಂದಾಗಿ ಕರ್ನಾಟಕ ಗೂಗಲ್ ಕಂಪನಿಯ ಹೂಡಿಕೆ ಕಳೆದುಕೊಂಡಿದೆ. ಈ ಸಂಬಂಧ ತಮಿಳುನಾಡು ಸರ್ಕಾರದ ಜೊತೆ ಗೂಗಲ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.

ವಾಸ್ತವದಲ್ಲಿ ಗೂಗಲ್ ಸಂಸ್ಥೆ ಕರ್ನಾಟಕದಲ್ಲಿ ಈ ಹೂಡಿಕೆ ಮಾಡಬೇಕಿತ್ತು. ಕಾಂಗ್ರೆಸ್ ಸರ್ಕಾರ ಗಾಢ ನಿದ್ರೆಯಲ್ಲಿದೆ. ಕರ್ನಾಟಕ ಶತಕೋಟಿ ಡಾಲರ್ ಹೂಡಿಕೆ ಕಳೆದುಕೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಾಗಾಗಿ ರಾಜ್ಯಕ್ಕೆ ಬರಬೇಕಿದ್ದ ಹೂಡಿಕೆ ನೆರೆ ರಾಜ್ಯಕ್ಕೆ ಹೋಗಿದೆ ಅಂತ ಬಿಜೆಪಿ ಕಿಡಿಕಾರಿದೆ.

ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕೂಡ ಟ್ವೀಟ್ ಮಾಡಿ ಸಿದ್ದು ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

Ad
Ad
Nk Channel Final 21 09 2023
Ad