News Karnataka Kannada
Tuesday, April 16 2024
Cricket
ಬೆಂಗಳೂರು ನಗರ

ನಟ ರಿಷಬ್‌ ಶೆಟ್ಟಿಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳಬೇಕೆ, ಇಲ್ಲಿದೆ ಅವಕಾಶ

Want to take a selfie with actor Rishab Shetty, here's the chance
Photo Credit : News Kannada

ಬೆಂಗಳೂರು: ನಟ ರಿಷಬ್ ಶೆಟ್ಟಿ ಅವರನ್ನು ಹತ್ತಿರದಿಂದ ನೋಡಬೇಕು, ಒಂದು ವಿಶ್ ಮಾಡಬೇಕು, ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕೆಂದು ಆಸೆ ಇಟ್ಟುಕೊಳ್ಳುವುದು ಸಹಜ. ಕಾಂತಾರ ಚಿತ್ರದ ನಂತರವಂತೂ ರಿಷಬ್ ಶೆಟ್ಟಿಯವರನ್ನು ನೋಡಬೇಕೆಂದು ಅದೆಷ್ಟೋ ಮಂದಿ ಕಾಯುತ್ತಿರಬಹುದು.

ಅದಕ್ಕೊಂದು ಉತ್ತಮ ಅವಕಾಶವನ್ನು ರಿಷಬ್ ಶೆಟ್ಟಿಯವರೇ ಕರುಣಿಸಿದ್ದಾರೆ. ಇದೇ ಜುಲೈ 7ರಂದು ಅವರ ಹುಟ್ಟುಹಬ್ಬ. ತಮ್ಮ ಜನ್ಮದಿನದ ಸಂದರ್ಭದಲ್ಲಿ ಅವರು ಇಂಥದ್ದೊಂದು ಭೇಟಿಗೆ ವೇದಿಕೆ ಸಿದ್ಧಪಡಿಸಿಕೊಂಡಿದ್ದು, ಆ ಮೂಲಕ ಅಭಿಮಾನಿಗಳ ಜತೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ಈ ಕುರಿತು ರಿಷಬ್​ ಶೆಟ್ಟಿಯವರೇ ಖುದ್ದು ವಿಡಿಯೋ ಸಂದೇಶ ಮೂಲಕ ಆಹ್ವಾನ ನೀಡಿದ್ದಾರೆ.

ಕೆರಾಡಿ ಎಂಬ ಸಣ್ಣ ಹಳ್ಳಿಯಿಂದ ಸಿನಿಮಾ ಕನಸು ಕಟ್ಟಿಕೊಂಡು ಬಂದ ನನಗೆ ಇಷ್ಟೊಂದು ಪ್ರೀತಿ ತೋರಿಸಿದ್ದೀರಿ, ಇಲ್ಲಿಯವರೆಗೆ ಕರೆತಂದಿದ್ದೀರಿ. ನೀವು ಇಷ್ಟೆಲ್ಲ ಪ್ರೀತಿ ತೋರಿದಾಗ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಗೊತ್ತಾಗಿಲ್ಲ. ಅದರಲ್ಲೂ ‘ಕಾಂತಾರ’ ಚಿತ್ರ ಬಿಡುಗಡೆ ಆದಾಗ ತುಂಬಾ ಜನ ಮನೆ ಹತ್ತಿರ ಬಂದಿದ್ದೀರಿ, ಹೋದಹೋದಲ್ಲಿ ನನ್ನ ಭೇಟಿಗೆ ಕಾದಿದ್ದೀರಿ, ಎಷ್ಟೋ ಜನರನ್ನು ನಾನು ಭೇಟಿ ಆಗಲು ಆಗಿರಲಿಲ್ಲ.

ಅದಕ್ಕೆ ನನ್ನ ಹುಟ್ಟಿದ ದಿನ ಇದೇ ಜುಲೈ 7ರ ಮಧ್ಯಾಹ್ನ 3ಕ್ಕೆ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್​ನಲ್ಲಿ ನಿಮ್ಮನ್ನು ಭೇಟಿಯಾಗಲು ನಾನು ಕಾಯುತ್ತಿರುತ್ತೇನೆ, ಅಲ್ಲಿಗೆ ನೀವೆಲ್ಲಾ ಬನ್ನಿ ಭೇಟಿಯಾಗೋಣ ಮಾತನಾಡೋಣ ಎನ್ನುವ ಮೂಲಕ ರಿಷಬ್​ ಶೆಟ್ಟಿ ತಮ್ಮ ಜನ್ಮದಿನಾಚರಣೆಗೆ ಅಭಿಮಾನಿಗಳೆಲ್ಲರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು