Bengaluru 21°C
Ad

ಗುಜರಾತ್‌ನ ‘ಸ್ಮೃತಿವನ ಮ್ಯೂಸಿಯಂ ಯುನೆಸ್ಕೋ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿಗೆ ಆಯ್ಕೆ

ಗುಜರಾತ್​ನ ಭುಜ್ ಜಿಲ್ಲೆಯ ಕಛ್​ನಲ್ಲಿರುವ ‘ಸ್ಮೃತಿವನ ’ಅನ್ನು ಪ್ರತಿಷ್ಠಿತ ಯುನೆಸ್ಕೋ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಗುಜರಾತ್​ನ ಭುಜ್ ಜಿಲ್ಲೆಯ ಕಛ್​ನಲ್ಲಿರುವ ‘ಸ್ಮೃತಿವನ ’ಅನ್ನು ಪ್ರತಿಷ್ಠಿತ ಯುನೆಸ್ಕೋ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಛ್ ಪ್ರದೇಶದಲ್ಲಿ 2001ರಲ್ಲಿ ಅನಾಹುತಕಾರಿ ಭೂಕಂಪ ಸಂಭವಿಸಿತ್ತು. ಭುಜ್  ಭೂಕಂಪದ ಕೇಂದ್ರವಾಗಿತ್ತು. ಭೂಕಂಪದ ಅನಾಹುತಗಳನ್ನು ಜನರು ಧೈರ್ಯವಾಗಿ ಎದುರಿಸಿ ಚೇತರಿಸಿಕೊಂಡಿದ್ದನ್ನು ಸ್ಮರಿಸಲೆಂದು ನರೇಂದ್ರ ಮೋದಿ ಅವರು 2022 ಆಗಸ್ಟ್ 28 (ಭಾನುವಾರ) ರಂದು ‘ಸ್ಮೃತಿವನ’ವನ್ನು ಲೋಕಾರ್ಪಣೆ ಮಾಡಿದ್ದರು.

ಈ ಕುರಿತು ಟ್ವೀಟ್‌ ಮಾಡಿರುವ ಮೋದಿ,ಕಚ್‌ನಲ್ಲಿರುವ ‘ಸ್ಮೃತಿವನ್’ 2001 ರ ಭೂಕಂಪದಲ್ಲಿ ನಾವು ಕಳೆದುಕೊಂಡವರ ಗೌರವಾರ್ಥವಾಗಿ ಹಾಗೂ ಆ ಅನಾಹುತಗಳನ್ನು ಜನರು ಧೈರ್ಯವಾಗಿ ಎದುರಿಸಿ ಚೇತರಿಸಿಕೊಂಡಿದ್ದನ್ನು ನೆನಪಿಸುತ್ತದೆ. ಈ ವಸ್ತುಸಂಗ್ರಹಾಲಯವು ಪ್ರಿಕ್ಸ್ ವರ್ಸೈಲ್ಸ್ ಮ್ಯೂಸಿಯಂಸ್ 2024 ರ ವಿಶ್ವ ಆಯ್ಕೆಯಲ್ಲಿ ಸ್ಥಾನವನ್ನು ಕಂಡುಕೊಂಡಿರುವುದು ಸಂತೋಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Ad
Ad
Nk Channel Final 21 09 2023
Ad