Ad

ಚಿಕ್ಕಣ್ಣನ ಬೆನ್ನಲ್ಲೇ ‘ಗರಡಿ’ ನಟನಿಗೂ ಸಂಕಷ್ಟ; ಠಾಣೆಗೆ ಕರೆದ ಖಾಕಿ ?

Yashahs

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನ ಜಾಲಾಡ್ತಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸ್ತಿದ್ದಾರೆ. ಈ ಮಧ್ಯೆ ಚಿಕ್ಕಣ್ಣಗೂ ವಿಚಾರಣೆ ನಡೆಸಿರೋ ಪೊಲೀಸರು ಮತ್ತೊಬ್ಬ ಸೆಲೆಬ್ರೆಟಿಗೆ ನೋಟಿಸ್ ಕೊಟ್ಟಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆಗಿದ್ದ ಸ್ಯಾಂಡಲ್‌ವುಡ್ ಮತ್ತೊಬ್ಬ ನಟನಿಗೂ ಸಂಕಷ್ಟ ಶುರುವಾಗಿದೆ.

Ad
300x250 2

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪ್ರಮುಖ ಆರೋಪಿಯಾಗಿದ್ದಾರೆ. ಹೀಗಾಗಿ, ಪೊಲೀಸರು ದರ್ಶನ್​ ಬಗೆಗಿನ ಇಂಚಿಂಚೂ ಮಾಹಿತಿಯನ್ನ ಕಲೆ ಹಾಕ್ತಿದ್ದಾರೆ. ಈ ಮಧ್ಯೆ ರೇಣುಕಾಸ್ವಾಮಿ ಹತ್ಯೆ ದಿನ ದರ್ಶನ್ ಜೊತೆ ಕಾಣಿಸಿಕೊಂಡಿದ್ದ ಯಶಸ್ ಸೂರ್ಯಗೂ ಸಂಕಷ್ಟ ಎದುರಾಗಿದೆ.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಯಶಸ್ ಸೂರ್ಯಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕೊಲೆಯಾದ ದಿನ ಸ್ಟೋನಿ ಬ್ರೂಕ್‌ ರೆಸ್ಟೋ ಬಾರ್‌ನಲ್ಲಿ ಚಿಕ್ಕಣ್ಣ ಜೊತೆಗೆ ನಟ ಯಶಸ್ ಸೂರ್ಯ ಕೂಡಾ ಇದ್ರು. ಡಿ ಗ್ಯಾಂಗ್ ಮಾಡ್ತಿದ್ದ ಪಾರ್ಟಿಯಲ್ಲಿ ಭಾಗಿಯಾಗಿದ್ರು ಎಂಬ ಅಂಶ ತಿಳಿದುಬಂದಿದೆೆ. ಹೀಗಾಗಿ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

Ad
Ad
Nk Channel Final 21 09 2023
Ad