Ad

ಪ್ರಧಾನಿ ಮೋದಿ ಭೇಟಿ ವೇಳೆ ಮುಖೋಪಾಧ್ಯಾಯರ ಮೇಲೆ ಗುಂಡು ಹಾರಿಸಿದ ವ್ಯಕ್ತಿ

 ಬಿಹಾರದ ನಳಂದದ ತೆಲ್ಹಾರ ಪ್ರೌಢಶಾಲೆಯ ಹಂಗಾಮಿ ಮುಖ್ಯೋಪಾಧ್ಯಾಯ ಸಂತೋಷ್‌ ಕುಮಾರ್‌ ಮೇಲೆ ಶಾಲೆಯ ಆವರಣಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ನಡೆದಿದೆ.

ಬಿಹಾರ್‌:   ಬಿಹಾರದ ನಳಂದದ ತೆಲ್ಹಾರ ಪ್ರೌಢಶಾಲೆಯ ಹಂಗಾಮಿ ಮುಖ್ಯೋಪಾಧ್ಯಾಯ ಸಂತೋಷ್‌ ಕುಮಾರ್‌ ಮೇಲೆ ಶಾಲೆಯ ಆವರಣಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ನಡೆದಿದೆ. ಈ ಘಟನೆ ಬುಧವಾರ ಬೆಳಿಗ್ಗೆ 9.25 ರ ಸುಮಾರಿಗೆ ಈ ದಾಳಿ ನಡೆದಿದೆ. ಪ್ರಧಾನಿ ಮೋದಿ ಬಿಹಾರಕ್ಕೆ ಭೇಟಿ ನೀಡಿದ ದಿನದಂದೇ ಈ ಘಟನೆ ನಡೆದಿದೆ.

Ad
300x250 2

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಫ್ಲರ್‌ ಧರಿಸಿದ್ಧ ಮತ್ತು ಪಿಸ್ತೂಲ್‌ ಹೊಂದಿದ್ದ ದಾಳಿಕೋರನು ಫೋನ್‌ ನಲ್ಲಿ ಮಾತನಾಡುತ್ತಿದ್ದ ಕುಳಿತ ಮುಖ್ಯೋಪಾದ್ಯಯರ ಬಳಿಗೆ ಬರುತ್ತಿರುವುದನ್ನು ನೋಡಬಹುದಾಗಿದೆ. ದುಷ್ಕರ್ಮಿ ಸ್ಥಳದಿಂದ ಪರಾರಿಯಾಗುವ ಮೊದಲು ಕುಮಾರ್‌ ಅವರ ಎಡಗಾಲಿಗೆ ಗುಂಡು ಹಾರಿಸಲಾಗಿದೆ. ಕುಮಾರ್‌ ಅವರನ್ನು ಅವರ ಸಹೋದ್ಯೋಗಿಗಳು ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ.

Ad
Ad
Nk Channel Final 21 09 2023
Ad